ನ್ಯೂಸ್

ಎಪ್ಸನ್ ಕಂಪನಿಯಿAದ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ೩.೫ ಕೋಟಿರೂ ಮೊತ್ತದ ನೋಟ್‌ಪುಸ್ತಕ, ಫಿಲ್ಟರ್,ಸ್ಮಾರ್ಟ್ಕ್ಲಾಸ್ ಕೊಡುಗೆ / ಆಟೋಟಕ್ಕೂ ಆದ್ಯತೆ ನೀಡಿ, ಖುಷಿಯಿಂದ ಕಲಿತು ಭವಿಷ್ಯ ರೂಪಿಸಿಕೊಳ್ಳಿ/ಸಾಂಭಮೂರ್ತಿ ಕರೆ

ವಿಜಯವಾಣಿ ಸುದ್ದಿಜಾಲ ಕೋಲಾರ
ಕಲಿಕೆಗೆ ಶ್ರದ್ಧೆ, ಛಲ, ನಿರ್ಧಿಷ್ಟ ಗುರಿಯಿದ್ದರೆ ಸಾಕು, ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವುದು ಮುಖ್ಯ, ಖುಷಿಯಿಂದ ಸಾಧನೆಯತ್ತ ಮುನ್ನುಗ್ಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಎಪ್ಸನ್ ಕಂಪನಿ ಅಧ್ಯಕ್ಷ ಎನ್.ಸಾಂಬಮೂರ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಎಪ್ಸನ್ ಕಂಪನಿ, ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್ ಮತ್ತು ಶಿಕ್ಷಕ ಗೆಳೆಯರ ಬಳಗದ ಸಹಯೋಗದಲ್ಲಿ ಎಪ್ಸನ್ ಕಂಪನಿಯಿAದ ಕೋಲಾರ ಜಿಲ್ಲೆಯ ೪೨೪೮೦ ಸರ್ಕಾರಿ ಶಾಲಾ ಮಕ್ಕಳಿಗೆ ೩.೫ ಕೋಟಿ ಮೊತ್ತದ ೨.೩೫ ಲಕ್ಷ ನೋಟ್ ಪುಸ್ತಕ, ೧೨ ಸಾವಿರ ಶಾಲಾ ಬ್ಯಾಗ್, ೭೭ ಶಾಲೆಗಳಿಗೆ ಶುದ್ದಕುಡಿಯುವ ನೀರಿನ ಫಿಲ್ಟರ್, ೫೦ ಶಾಲೆಗಳಿಗೆ ಸ್ಮಾರ್ಟ್ಕ್ಲಾಸ್‌ಗಳನ್ನು ಕೊಡುಗೆಯಾಗಿ ವಿತರಿಸಿ ಅವರು ಮಾತನಾಡಿದರು.

ನಿಮ್ಮ ತಂದೆ ತಾಯಿಯ ಆಶಯ ನಿಜವಾಗಿಸಿ, ನಿಮ್ಮ ಕನಸಿಗೆ ನೋಟ್ ಪುಸ್ತಕ, ಬ್ಯಾಗ್ ನಮ್ಮ ಚಿಕ್ಕ ಕಾಣಿಕೆಯಷ್ಟೆ, ಸಮಾಜ, ದೇಶಕ್ಕೆ ಕೊಡುಗೆ ನೀಡುವ ರೀತಿಯಲ್ಲಿ ನಿಮ್ಮ ಸಾಧನೆ ಮುಂದುವರೆಸಿ, ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದು ತಿಳಿಸಿದರು.

ಪ್ರತಿ ವಿದ್ಯಾರ್ಥಿಯಲ್ಲೂ ಅಗಾಧವಾದ ಶಕ್ತಿ ಇದೆ, ಅದುನ್ನು ಹೊರತರುವ ಕೆಲಸವಾಗಬೇಕು, ನೀವು ಸಾಧನೆಯ ಛಲದೊಂದಿಗೆ ಮುನ್ನುಗ್ಗಿದರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಜ್ಞಾನ, ಶೈಕ್ಷಣಿಕ ಸಾಧನೆ ಇದ್ದರೆ ಹಣ ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎಂದರು.

ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಹಕಾರಿ:
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಈ ವರ್ಷವೊಂದರಲ್ಲೇ ೩.೫ ಕೋಟಿ ರೂ ವೆಚ್ಚದ ನೆರವನ್ನು ಸರ್ಕಾರಿ ಶಾಲೆಗಳಿಗೆ ಎಪ್ಸನ್ ಕಂಪನಿ ಹರಿಸಿದೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಮತ್ತು ಬಲವರ್ಧನೆಗೆ ಇದು ಸಹಕಾರಿಯಾಗಿದೆ. ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಿಗೂ ಸ್ಮಾರ್ಟ್ ಕ್ಲಾಸ್ ಒದಗಿಸಲು ಕೋರಿದರು.

ಎಪ್ಸನ್ ಕಂಪನಿ ಅಧಿಕಾರಿ ನವೀನ್ ಶೆಟ್ಟಿ ಮಾತನಾಡಿ, ನಾವು ಪ್ರತಿವರ್ಷ ನಿಮ್ಮ ನೆರವಿಗೆ ಬರುತ್ತೇವೆ, ನೀವು ದೊಡ್ಡ ಕನಸು ಕಾಣಿ, ಆ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮ, ಛಲದಿಂದ ಓದಿ ಎಂದು ಕಿವಿಮಾತು ಹೇಳಿ, ನಾವು ನೀಡುತ್ತಿರುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಾಲಕಿಯರ ಪಿಯು ಕಾಲೇಜು ಉಪಪ್ರಾಂಶುಪಾಲೆ ಮಂಜುಳಾ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ನೆರವಾಗುವ ಹೃದಯಂತಿಕೆಗೆ ಧನ್ಯವಾದ ತಿಳಿಸಿ, ನಮ್ಮ ಮಕ್ಕಳಿಗೆ ಶುದ್ದ ಕುಡಿಯುವ ನೀರು, ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ಸೌಲಭ್ಯ, ನೋಟ್ ಪುಸ್ತಕ, ವಿಜ್ಞಾನ ಕಿಟ್ ನೆರವು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್ನ ಹರೀಶ್, ಅನಿಲ್ ಜೋಷಿ, ಎಪ್ಸನ್ ಕಂಪನಿಯ ಅಧಿಕಾರಿಗಳಾದ ವಿನಯ್‌ಕುಮಾರ್ ರೆಡ್ಡಿ, ರಾಜೇಂದ್ರಕುಮಾರ್, ವಿಜಯ್‌ಗೋವಿಂದ್ ಅಶೋಕ್ ಕುಮಾರ್ ದಾಸ್, ಗೋಪಾಲಕೃಷ್ಣ, ನವೀನ್ ಶೆಟ್ಟಿ, ವೇಲನ್, ಶ್ರೀಧರನ್, ಬೈರೇಶ್, ರಾಮಪ್ರಸಾದ್,ಪ್ರಭಾಕರನ್, ಅರ್ಬಾಸ್‌ಖಾನ್, ಚಂದ್ರಶೇಖರ್, ಶಿಕ್ಷಕ ಗೆಳೆಯರ ಬಳಗದ ವೆಂಕಟಾಚಲಪತಿಗೌಡ, ಸಿಆರ್‌ಪಿ ಗೋವಿಂದ್, ಚಂದ್ರಪ್ಪ, ಹನುಮಾನ್ ಸಿಂಗ್, ನಾರಾಯಣಸ್ವಾಮಿ, ಕೋಟೇಶ್ವರರಾವ್, ಮುನಿರಾಜು, ಚಿಕ್ಕಣ್ಣ, ಸೋಮಶೇಖರ್, ಕೃಷ್ಣಪ್ಪ ಮತ್ತು ಶಿಕ್ಷಕರು ಹಾಜರಿದ್ದರು.

ಚಿತ್ರ ೨೫ ಕೆ.ಎಲ್.ಆರ್. ೦೫ : ಕೋಲಾರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಗೆ ೩.೫ ಕೋಟಿ ವೆಚ್ಚದ ನೋಟ್ ಪುಸ್ತಕ, ವಾಟರ್‌ಫಿಲ್ಟರ್, ಸ್ಮಾರ್ಟ್ ಕ್ಲಾಸ್ ಕೊಡುಗೆಯಾಗಿ ನೀಡುವ ಸಮಾರಂಭಕ್ಕೆ ಎಪ್ಸನ್ ಕಂಪನಿಯ ಅಧ್ಯಕ್ಷ ಸಾಂಭಮೂರ್ತಿ ಚಾಲನೆ ನೀಡಿದರು.