ನಗರದಲ್ಲಿ 10 ದಿನಗಳ ಕಾಲ ಆಯೋಜಿಸಿದ್ದ ಎನ್‌ಸಿಸಿ ಗ್ರೂಪ್ ಪ್ರಧಾನ ಕಚೇರಿಯ 3 ಕರ್ನಾಟಕ ಬಾಲಕಿಯರ ಕೆಎಟಿಸಿ-1 ಶಿಬಿರ ಯಶಸ್ವಿಯಾಗಿ ಸಮಾಪ್ತಿಗೊಂಡಿತು.
ಶಿಬಿರದಲ್ಲಿ ಒಟ್ಟು 467 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಮೈಸೂರಿನ ಎನ್‌ಸಿಸಿ 3 ಕಾರ್ ಬಾಲಕಿಯರ ಕಮಾಂಡಿಂಗ್ ಆಫೀಸರ್ ಕರ್ನಲ್ ಸಿಪಿಎಸ್ ಸೋಮ್ವಾಲ್ ಶಿಬಿರದ ಕಮಾಂಡೆಂಟ್ ಆಗಿದ್ದರು. ಶುಕ್ರವಾರ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತ ಕೆಡೆಟ್‌ಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಹತ್ತು ದಿನಗಳ ಕಾಲ ನಡೆದ ಶಿಬಿರದಲ್ಲಿ ತಜ್ಞರಿಂದ ನಾನಾ ಉಪನ್ಯಾಸ, ನಾನಾ ತರಬೇತಿ ಕಾರ್ಯಕ್ರಮಗಳು ನಡೆದವು. ಮುಖ್ಯವಾಗಿ ವಿಶ್ವ ಟೇಕ್ವಾಂಡೋ ಫೆಡರೇಷನ್‌ನ ಹಿರಿಯ ಮಾಸ್ಟರ್ ಪ್ರತಾಪ್ ಬಾಬು ಅವರಿಂದ ಡೆಮೋಸ್ಟ್ರೇಷನ್ ಮತ್ತು ಸ್ವರಕ್ಷಣಾ ತರಬೇತಿ ನಡೆಯಿತು. ಕರ್ನಾಟಕ ಪೊಲೀಸ್ ಅಕಾಡೆಮಿಯ ಡಿಎಸ್‌ಪಿ ರೇಣುಕಾರಾಧ್ಯ ಅವರು ಸೈಬರ್ ಅಪರಾಧದ ಕುರಿತು ಉಪನ್ಯಾಸ ನೀಡಿದರು. ಕೆ ಆರ್ ಆಸ್ಪತ್ರೆಯ ಸ್ಟಾಫ್ ನರ್ಸ್ ಎಂ.ರೇಷ್ಮಾ ಅವರಿಂದ ಆರೋಗ್ಯ ಸಂಬಂಧಿಸಿದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ವಕೀಲರಾದ ಎನ್.ಗೀತಾ ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಕುರಿತು ಉಪನ್ಯಾಸ ನೀಡಿದರು.
ಕಮಾಂಡಿಂಗ್ ಆಫೀಸರ್ ಸೋಮ್ವಾಲ್ ಶಿಬಿರದುದ್ದಕ್ಕೂ ಜವಾಬ್ದಾರಿ, ಸ್ವಾವಲಂಬನೆ, ಸ್ವಸಹಾಯ ಮತ್ತು ತಂಡ-ಸ್ಫೂರ್ತಿ, ನಾಯಕತ್ವ, ಶಿಸ್ತು, ಸಹಕಾರಗಳ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿದರು.