ನ್ಯೂಸ್

ಎನ್‌ಎಂಎಂಎಸ್ ಪರೀಕ್ಷೆಗೆ 660 ಮಂದಿ ಹಾಜರು

ಚಿತ್ರದುರ್ಗ: ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಮಾಪನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್‌ಕ್ಯೂಎಎಸಿ) ವತಿಯಿಂದ ಭಾನುವಾರ ನಡೆದ ಎನ್‌ಎಂಎಂಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 703 ವಿದ್ಯಾರ್ಥಿಗಳ ಪೈಕಿ, 660 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಹೊಳಲ್ಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.

ಪಟ್ಟಣದ ಟಿಪಿಸಿಕೆ ಮತ್ತು ಎಂಎಂ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಎಸ್‌ಕ್ಯೂಎಎಸಿ ಮಾರ್ಗಸೂಚಿಯಂತೆ 10.30 ರಿಂದ 12.00ರವರೆಗೆ ಬೌದ್ಧಿಕ ಸಾಮರ್ಥ್ಯ, ಮಧ್ಯಾಹ್ನ 2ರಿಂದ 3.30ರವರೆಗೆ ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆಯನ್ನು ಎಸ್‌ಓಪಿ ಆಧಾರಿತವಾಗಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕೇಂದ್ರದ ನೋಡಲ್ ಅಧಿಕಾರಿ ಎಸ್.ಬಸವರಾಜು ಮಾಹಿತಿ ನೀಡಿದ್ದಾರೆ. ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಸುರೇಂದ್ರನಾಥ್ ಇದ್ದರು.