ನ್ಯೂಸ್

ಎಟಿಜಿಎಂ ಮಿಸೈಲ್​ ಪರೀೆ ಯಶಸ್ವಿ

ಬೆಂಗಳೂರು: ಇಂಡಿಜೀನಿಯಸ್​ ತಂತ್ರಜ್ಞಾನದ ಮೂಲಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಭಿವೃದ್ಧಿಪಡಿಸಿರುವ ಆ್ಯಂಟಿ ಟ್ಯಾಂಕ್​ ಗೈಡೆಡ್​ ಮಿಸೈಲ್​ (ಎಟಿಜಿಎಂ) ಪರೀೆ ಯಶಸ್ವಿಯಾಗಿದೆ.
ಮಹಾರಾಷ್ಟ್ರದ ಅಹ್ಮದ್​ನಗರನಲ್ಲಿನ ಕೆ.ಕೆ.ರೇಂಜ್​ನಲ್ಲಿ ಅರ್ಜುನ್​ ಟ್ಯಾಂಕ್​ ಮೂಲಕ ಗುರುವಾರ ಪರೀೆಗೊಳಪಡಿಸಲಾಯಿತು. ಲೇಸರ್​ ಮಾರ್ಗದರ್ಶನದಲ್ಲಿ ಗುರಿ ತಲುಪುವ ಎಟಿಜಿಎಂಗೆ ನೀಡಲಾಗಿದ್ದ ಗುರಿಯನ್ನು ಮುಟ್ಟಿ ಪರೀೆ ಸಲವಾಯಿತು. 1.5ರಿಂದ 5 ಕಿ.ಮೀ. ರೇಂಜ್​ನ ಆಮ್​ರ್ಡ್​ ವಾಹನದ ಮೂಲಕ ಮಿಸೈಲ್​ ಅನ್ನು ಬಳಸಬಹುದಾಗಿದೆ. ಡಿಆರ್​ಡಿಒ ಭಾಗಗಳಾದ ಪುಣೆಯ ಎಆರ್​ಡಿಇ, ಎಚ್​ಇಎಂಆರ್​ಎಲ್​ ಮತ್ತು ಡೆರಾಡೂನ್​ನ ಐಆರ್​ಡಿಇ ನೂತನ ಮಿಸೈಲ್​ ಅಭಿವೃದ್ಧಿಗೆ ಕೆಲಸ ಮಾಡಿವೆ. ಎಟಿಜಿಎಂ ಯಶಸ್ಸಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಡಿಆರ್​ಡಿಒಗೆ ಶುಭಾಷಯವನ್ನು ತಿಳಿಸಿದ್ದು, ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮತ್ತೊಂದು ಕೊಡುಗೆ ನೀಡಿದಂತಾಗಿದೆ.