ಯಾದಗಿರಿ: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಶ್ವನಾಥರಡ್ಡಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.
ವಿಶ್ವನಾಥರಡ್ಡಿ ಯಾದಗಿರಿ, ಹಾಗೂ ರಾಯಚೂರು ಆರೋಗ್ಯ ಇಲಾಖೆ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ ನಿದ್ರೆ ಮಂಪರಿನಲ್ಲಿದ್ದಾಗಲೇ ರಡ್ಡಿಗೆ ಲೋಕಾ ಪೊಲೀಸರು ಶಾಕ್ ನೀಡಿದ್ದಾರೆ. ನಗರದ
ಯಾದಗಿರಿ ನಗರದ ಗ್ರೀನ್ ಸಿಟಿಯಲ್ಲಿರುವ ವಿಶ್ವನಾಥ ರೆಡ್ಡಿ ಮನೆ ಲೋಕಾಯುಕ್ತ ಎಸ್ಪಿ ಎ.ಆರ್.ಕರ್ನೂಲ್ ನೇತೃತ್ವದಲ್ಲಿ ಒಬ್ಬ ಡಿವೈಎಸ್ಪಿ ಇಬ್ಬರು ಪಿಎಸ್ ಐ ತಂಡ ದಾಳಿ ನಡೆಸಿ ತಲಾಷ್ ನಡೆಸಿದೆ.