ಸರಗೂರು: ತಾಲೂಕಿನ ಎಂಸಿ ತಳಲು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ರಂಜಿತಾ ಮಾದ್ದಪ್ಪ, ಉಪಾಧ್ಯಕ್ಷರಾಗಿ ಲಕ್ಷ್ಮೀ ಕೆ.ಸಿ.ಕುಮಾರ್ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ರಂಜಿತಾ ಮಾದ್ದಪ್ಪ ಆರು ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಲಕ್ಷ್ಮೀ ವೆಂಕಟರಾಮು 5 ಮತಗಳನ್ನು ಪಡೆದು ಸೋಲು ಅನುಭವಿಸಿದರು. ನಾಗಮ್ಮ ವಿರುದ್ಧ ಲಕ್ಷ್ಮೀ ಕೆ.ಸಿ.ಕುಮಾರ್ ಜಯ ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಕಬಿನಿ ಉಪವಿಭಾಗ ನೀರಾವರಿ ಅಧಿಕಾರಿ ಉಷಾ ಕಾರ್ಯನಿರ್ವಹಿಸಿದರು. ಪ್ರಕಾಶ್ ಚಂದ್ರ, ರಮೇಶ್, ಕೆಂಡನಾಯಕ, ನಿಂಗಮ್ಮ, ಪಿಡಿಒ ಶಿಲ್ಪಾ, ಸಿಬ್ಬಂದಿ ಹರೀಶ್, ಕಾಂಗ್ರೆಸ್ ಮುಖಂಡರಾದ ಜಯಲಕ್ಷ್ಮೀಪುರ ನಾಗೇಂದ್ರ, ಜಯಕುಮಾರ್, ನಂದೀಶ್, ಪ್ರಕಾಶ್, ಮಾದೇಗೌಡ, ಕರಿಗೌಡ, ಎಸ್.ಕೆ.ಬಾಬು, ದೊಡ್ಡಭೋವಿ, ಪ್ರಭು ಇತರರು ಇದ್ದರು.