ನ್ಯೂಸ್

ಉಪ್ಪುಕುಂಟೆ ಶಾಲಾ ಶೌಚಾಲಯ ಕಳಪೆ ಕಾಮಗಾರಿ ಕ್ರಮಕ್ಕೆ ಆಗ್ರಹಿಸಿ ಕೆ.ಪಿ.ಆರ್.ಎಸ್ ನಿಂದ ಒತ್ತಾಯ.

ವಿಜಯವಾಣಿ ಸುದ್ದಿಜಾಲ ಕೋಲಾರ

ತಾಲ್ಲೂಕಿನ ಸುಗಟೂರು ಹೋಬಳಿಯ ಉಪ್ಪುಕುಂಟೆ ಗ್ರಾಮದಲ್ಲಿನ ಶಾಲೆಯ ಶೌಚಾಲಯವು ಕಳಪೆ ಗುಣಮಟ್ಟದಿಂದ ಕೂಡಿದ್ದು ಕಾಮಗಾರಿ ನಡೆಸಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಶುಕ್ರವಾರ ಕರ್ನಾಟಕ ಪ್ರಾಂತ ರೈತ ಸಂಘದಿAದ ಕೆ.ಐ.ಆರ್.ಡಿ.ಎಲ್ ಇಂಜಿನಿಯರ್ ಮಂಜುನಾಥ್ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಕೆ.ಪಿ.ಆರ್.ಎಸ್ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆAಕಟೇಶ್ ಮಾತನಾಡಿ, ಶಾಲಾ ಶೌಚಾಲಯವು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ೫ ಲಕ್ಷ ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸುತ್ತಾ ಇದ್ದು ಕಳಪೆ ಗುಣಮಟ್ಟ ಹಾಗೂ ಹಳೆಯ ಶೌಚಾಲಯದ ವಸ್ತುಗಳನ್ನು ಬಳಸಿಕೊಂಡು ಹೊಸ ಶೌಚಾಲಯದ ಹೆಸರಿನಲ್ಲಿ ನಿರ್ಮಿಸಿದ್ದಾರೆ, ಅಧಿಕಾರಿಗಳು ಈ ಶೌಚಾಲಯಕ್ಕೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡಬಾರದು ಜೊತೆಗೆ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಸರ್ಕಾರವು ಬಡವರ ಮನೆ ನಿರ್ಮಾಣಕ್ಕೆ ಎರಡು ಲಕ್ಷ ಬಿಡುಗಡೆ ಮಾಡುತ್ತಾರೆ ಆದರೆ ಬರೀ ಶೌಚಾಲಯ ನಿರ್ಮಾಣಕ್ಕೆ ಐದು ಲಕ್ಷ ಕೊಟ್ಟರು ಸಹ ಹಿಂದೆ ಶಾಲೆಯಲ್ಲಿ ಇದ್ದ ಶೌಚಾಲಯದ ಪಾಯದ ಮೇಲೆ ಕಟ್ಟಡವನ್ನು ನಿರ್ಮಿಸಿದ್ದಾರೆ. ಸಿಮೆಂಟ್ ಕಲಂಗಳನ್ನು ಸಹ ಹಾಕಿಲ್ಲ. ಕಟ್ಟಡಕ್ಕೆ ಅತ್ಯಂತ ಕಡಿಮೆ ಸಿಮೆಂಟ್ ಬಳಕೆ ಮಾಡಲಾಗಿದೆ. ಗೋಡೆಗಳಿಗೆ ಕ್ಯೂರಿಂಗ್ ಸಹ ಮಾಡಿಲ್ಲ. ಹಳೆಯ ಪಿಟ್‌ಗೆ ಸಂಪರ್ಕವನ್ನು ನೀಡಲಾಗಿದೆ. ಶಾಲೆಯಲ್ಲಿದ್ದ ಹಳೆಯ ನೀರಿನ ಡ್ರಮ್ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಈ ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನು ಸಹ ಕಲ್ಪಿಸಿಲ್ಲ. ಕಟ್ಟಡವನ್ನು ತರಾತುರಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದಿಂದ ನಿರ್ಮಿಸಲಾಗಿದೆ. ಶಾಲಾ ಮಕ್ಕಳು ಮತ್ತು ಶಿಕ್ಷಕರು ಭಯದ ನಡುವೆ ಶೌಚಾಲಯವನ್ನು ಉಪಯೋಗಿಸಬೇಕಾಗಿದೆ ಕೂಡಲೇ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಆಲಹಳ್ಳಿ ವೆಂಕಟೇಶಪ್ಪ, ಪ್ರಧಾನ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಉಪ್ಪುಕುಂಟೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮರೇಶ್‌ಬಾಬು, ಮುಖಂಡರಾದ ಮಂಜುನಾಥ್, ಲಕ್ಷ್ಮಣ್ ಮುಂತಾದವರು ಇದ್ದರು.

ಚಿತ್ರ ೨೭ ಕೆ.ಎಲ್.ಆರ್. ೦೨ : ಉಪ್ಪುಕುಂಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿಲ್ಲಿಸಿರುವ ಶೌಚಾಲಯ ಕಳಪೆ ಗುಣಮಟ್ಟದಿಂದ ಕೂಡಿದೆ. ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕೆ.ಪಿ.ಆರ್.ಎಸ್.ನಿಂದ ಮನವಿ.