ನ್ಯೂಸ್

ಉಪ್ಪಾರರನ್ನು ಎಸ್ಟಿಗೆ ಸೇರ್ಪಡೆ ಮಾಡಿ

ಕೊಳ್ಳೇಗಾಲ: ಉಪ್ಪಾರ ಸಮಾಜವನ್ನು ಎಸ್ಸಿ ಅಥವಾ ಎಸ್ಟಿ ಸಮುದಾಯಕ್ಕೆ ಸೇರ್ಪಡೆ ಮಾಡಬೇಕೆಂದು ಭಗೀರಥ ಉಪ್ಪಾರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್ ಒತ್ತಾಯಿಸಿದರು.


ದೇಶದ ಎಲ್ಲ ರಾಜ್ಯಗಳಲ್ಲಿ ಉಪ್ಪಾರ ಸಮುದಾಯ ಜನರಿದ್ದಾರೆ. ಅಂತೆಯೇ ರಾಜ್ಯದಲ್ಲಿ 60 ಲಕ್ಷ ಸಂಖ್ಯೆಯಲ್ಲಿದ್ದೇವೆ. ಆದರೆ ನಮ್ಮನಾಳುವ ಸರ್ಕಾರಗಳು ಈ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಂಪೂರ್ಣ ವಿಫಲವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


ಈ ಹಿಂದೆ ಬಸವರಾಜ ಬೊಮ್ಮಾಯಿ ಉಪ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಸಿ.ಎಂ ಯಡಿಯೂರಪ್ಪ ಅವರಿಗೆ ಉಪ್ಪಾರ ಸಮುದಾಯ ಬದುಕು ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದ ಜನರಂತೆಯೇ ಇದ್ದು ಇವರನ್ನು ಎಸ್ಸಿ ಅಥವಾ ಎಸ್ಟಿ ಜನಾಂಗಕ್ಕೆ ಸೇರಿಸಬೇಕೆಂದು ಪತ್ರ ಬರೆದಿದ್ದರು. ಪತ್ರದ ಒತ್ತಾಯದಂತೆ ಬಿ.ಎಸ್.ಯಡಿಯೂರಪ್ಪ ಸಹ ಭರವಸೆ ನೀಡಿದ್ದರು. ಆದರೆ ಇಲ್ಲಿವರೆಗೂ ಉಪ್ಪಾರರ ಬೇಡಿಕೆ ಈಡೇರಿಲ್ಲ. ಪ್ರಸ್ತುತ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿದ್ದಾರೆ. ಆದ್ದರಿಂದ ಹಲವು ವರ್ಷದ ಬೇಡಿಕೆಯಾಗಿರುವ ಉಪ್ಪಾರ ಜನರ ಬೇಡಿಕೆಯನ್ನು ಈಗಲಾದರೂ ಪೂರೈಸಬೇಕು ಎಂದು ಆಗ್ರಹಿಸಿದರು. ಭಗೀರಥ ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಡಿ.ಪಿ. ಗೋವಿಂದ, ಖಜಾಂಚಿ ಮಹದೇವಸ್ವಾಮಿ, ಸಹ ಕಾರ್ಯದರ್ಶಿ ನಟರಾಜು ಇದ್ದರು.