ನ್ಯೂಸ್

ಉಪನ್ಯಾಸಕಿ ಅಮಾನತಿಗೆ ಒತ್ತಾಯಿಸಿ ಮನವಿ

ಚಿತ್ರದುರ್ಗ: ತರಗತಿಯಲ್ಲಿ ವಿದ್ಯಾರ್ಥಿಗಳೆದರು ಪಾಕಿಸ್ತಾನವನ್ನು ಓಲೈಸುವ ರೀತಿ ಹಾಗೂ ನಮ್ಮ ದೇಶದ ವಿರುದ್ಧ ಪ್ರಚೋದನಕಾರಿಯಾಗಿ ಉಪನ್ಯಾಸಕಿ ಯೊಬ್ಬರು ಮಾತನಾಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ಕಾರ‌್ಯಕರ್ತರು ಮಂಗಳವಾರ ನಗರದ ಎಸ್‌ಜೆಎಂ ಕಾನೂನು ಕಾಲೇಜಿನ ಪ್ರಾಚಾರ‌್ಯ ಡಾ.ಎಸ್.ದಿನೇಶ್ ಅವರಿಗೆ ಮನವಿ ಸಲ್ಲಿಸಿದರು.

ಭಾರತದ ರಾಜಕೀಯ ಪಕ್ಷಗಳ ನಡುವಿನ ಸಂಘರ್ಷಕ್ಕೆ ನೆರೆಹೊರೆ ರಾಷ್ಟ್ರಗಳಾದ ಪಾಕಿಸ್ತಾನ,ಅಪಘಾನಿಸ್ತಾನ ಬಲಿಪಶುಗಳಾಗುತ್ತಿವೆ ಎಂದಿರುವ ಉಪನ್ಯಾಸಕಿಯನ್ನು ಕಾಲೇಜು ಆಡಳಿತ ಮಂಡಳಿ ಕೂಡಲೇ ಅಮಾನತು ಮಾಡಬೇಕು ಹಾಗೂ ಆ ಉಪನ್ಯಾಸಕಿ ಬಹಿರಂಗವಾಗಿ ವಿದ್ಯಾರ್ಥಿ ಗಳ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಕನಕರಾಜ್ ಕೋಡಿಹಳ್ಳಿ,ಗೋಪಿ,ಗುರುರಾಜ್,ರಾಘ ವೇಂದ್ರ ಮತ್ತಿತರರಿದ್ದರು.