ನ್ಯೂಸ್

ಉಪನಗರ ರೈಲು ಯೋಜನೆ ಕಾಮಗಾರಿ ಪರಿಶೀಲಿಸಿದ ಸಚಿವ

ಬೆಂಗಳೂರು: ಉಪನಗರ ರೈಲ್ವೆ ಯೋಜನೆಯ ಯಶವಂತಪುರ- ಬೆನ್ನಿಗಾನಹಳ್ಳಿ‌ ನಡುವಿನ‌ ಕಾಮಗಾರಿಯನ್ನು ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಪರಿಶೀಲಿಸಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

ಜಾರ್ಜ್ ಅವರ ಕ್ಷೇತ್ರದಲ್ಲಿ ಬರುವ ಲಿಂಗರಾಜಪುರದಲ್ಲಿ ರೈಲ್ವೆ ತಡೆಗೋಡೆ, ಸೋಂಪುರದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು ಸಚಿವರು ಪರಿಶೀಲಿಸಿದರು. ಬಳಿಕ ಹೆಬ್ಬಾಳದಲ್ಲಿ ಉದ್ದೇಶಿತ ರೈಲ್ವೆ‌ ನಿಲ್ದಾಣದ ‌ಕಾಮಗಾರಿ ವೀಕ್ಷಣೆ ಮಾಡಿದರು.