ಆರ್.ಆರ್.ನಗರದಲ್ಲಿ 4.60 ಲಕ್ಷ ಮತದಾರರು
ಉಪ ಸಮರಕ್ಕೆ ಚುನಾವಣಾ ಆಯೋಗ ಸಿದ್ಧ
ಆರ್.ಆರ್.ನಗರ ಕ್ಷೇತ್ರಕ್ಕೆ 1374 ಬ್ಯಾಲೆಟ್ ಯುನಿಟ್, 1,374 ಕಂಟ್ರೋಲ್ ಯುನಿಟ್ ಹಾಗು 1374 ವಿ.ವಿ.ಪ್ಯಾಟ್ ಹಾಗೂ ಶಿರಾ ಕ್ಷೇತ್ರಕ್ಕೆ ತಲಾ 660 ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿ.ವಿ.ಪ್ಯಾಟ್ ವ್ಯವಸ್ಥೆ ಮಾಡಲಾಗಿದೆ.
ಚುನಾವಣಾ ಆಯೋಗ ಈ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಆರ್.ಆರ್.ನಗರ ಕ್ಷೇತ್ರದಲ್ಲಿ 678 ಹಾಗೂ ಶಿರಾ ಕ್ಷೇತ್ರದಲ್ಲಿ 330 ಮತಗಟ್ಟೆಗಳನ್ನು ಸ್ಥಾಪಿಸಲಿದೆ.
ಆರ್.ಆರ್.ನಗರ ಕ್ಷೇತ್ರದಲ್ಲಿ 2,40,061 ಪುರುಷ, 2,20,261 ಮಹಿಳಾ , 79 ಇತರೆ ಮತದಾರರು ಸೇರಿದಂತೆ 4,60,401 ಮತದಾರರಿದ್ದಾರೆ. ಶಿರಾ ಕ್ಷೇತ್ರದಲ್ಲಿ 1,19,265 ಪುರುಷ, 1,05,418 ಮಹಿಳಾ ಮತದಾರರು, 10 ಇತರೆ ಮತದಾರು ಸೇರಿದಂತೆ 2,15,693 ಮತದಾರರಿದ್ದಾರೆ.
ಉಪ ಚುನಾವಣೆ ನಡೆಯುತ್ತಿರುವ ಆರ್.ಆರ್.ನಗರ ಕ್ಷೇತ್ರದಲ್ಲಿ 4.60 ಲಕ್ಷ ಮತದಾರರಿದ್ದದರೆ, ಶಿರಾ ಕ್ಷೇತ್ರದಲ್ಲಿ 2.15 ಲಕ್ಷ ಮತದಾರರಿದ್ದಾರೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೂ ಸೌಲಭ್ಯ
ಕರೊನಾ ಸೋಂಕಿತ/ಶಂಕಿತರಿಗೂ ಅಂಚೆ ಮತದಾನ!
ಅಂಚೆ ಮತದಾನ ವಿಸ್ತರಣೆ
ಬಾಕ್ಸ್:
ಅಂಗವಿಕಲರು, 80 ವರ್ಷ ಮೇಲ್ಪಟ್ಟವರು ಹಾಗೂ ಕರೊನಾ ಸೋಂಕಿತ ಹಾಗೂ ಶಂಕಿತರಿಗೆ
ಅಂಚೆ ಮತದಾನ ಸೌಲಭ್ಯ ಸಿಗಲಿದೆ. ವಿಧಾನ ಪರಿಷತ್ 4 ಕ್ಷೇತ್ರ ಹಾಗೂ 2 ವಿಧಾನಸಭೆ ಉಪ ಚುನಾವಣೆಯಲ್ಲಿ ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟವರು ಹಾಗೂ ಕರೊನಾ ಸೋಂಕಿತರು ಹಾಗೂ ಶಂಕಿತರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಅಧಿಕಾರಿಗಳ ಜತೆಗೂಡಿ ರಿಟರ್ನಿಂಗ್ ಅಧಿಕಾರಿಗಳು ಅಂಚೆ ಮತಪತ್ರದ ವ್ಯವಸ್ಥೆ ಮಾಡಲಿದ್ದಾರೆ.