ನ್ಯೂಸ್

ಉಪ ಚುನಾವಣೆಗೆ ಅಧಿಸೂಚನೆ

ಚಿತ್ರದುರ್ಗ: ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಸಭೆ ಮತ್ತು ನಾಯಕನಹಟ್ಟಿ ಪಪಂ ಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

ಚಿತ್ರದುರ್ಗ ನಗರಸಭೆ 15ನೇ ವಾರ್ಡ್-ಹಿಂದುಳಿದ ವರ್ಗ-(ಎ), ಚಳ್ಳಕೆರೆ ನಗರಸಭೆ 4ನೇ ವಾರ್ಡ್-ಸಾಮಾನ್ಯ ಹಾಗೂ ನಾಯಕನಹಟ್ಟಿ ಪಪಂ ಜಾಗನೂರುಹಟ್ಟಿಯ 1ನೇ ವಾರ್ಡ್-ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗದಿಯಾಗಿದ್ದು, ನ.4ರಂದು ಅಧಿಸೂಚನೆ ಹೊರಡಿಸಲಾಗಿದೆ. 11ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 12ರಂದು ನಾಮಪತ್ರಗಳ ಪರಿಶೀಲನೆ, 14ರಂದು ನಾಮಪತ್ರ ಹಿಂತೆಗೆತಕ್ಕೆ ಅಂತಿಮ ದಿನ. 23ರಂದು ಶನಿವಾರ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ.

ಅಗತ್ಯವಿದ್ದಲ್ಲಿ 25ರಂದು ಮರು ಮತದಾನ. 26ರಂದು ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ. ಸೋಮವಾರದಿಂದ 26ರವರೆಗೆ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಡಿಸಿ ಟಿ.ವೆಂಕಟೇಶ್ ತಿಳಿಸಿದ್ದಾರೆ.