ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ನಾಯಕ ನೌಕರರ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಯಪ್ರಕಾಶ್ ಚಿಕ್ಕಣ್ಣ, ಅನಿತಾ ನಿಂಗನಾಯಕ, ಮಿಲ್ ನಾಗರಾಜು, ಸರೋಜಮ್ಮ, ಸಿದ್ದನಾಯಕ, ಚಿಕ್ಕನಾಯಕ ಇದ್ದರು. 
ನ್ಯೂಸ್

ಉದ್ಯೋಗಕ್ಕಾಗಿ ವಿದ್ಯಾಭ್ಯಾಸ ಸೀಮಿತ ಬೇಡ

ಎಚ್.ಡಿ.ಕೋಟೆ: ವಿದ್ಯಾರ್ಥಿಗಳು ತಂದೆ, ತಾಯಿ, ಗುರುಹಿರಿಯರಿಗೆ ಗೌರವ ಕೊಡಬೇಕು ಎಂದು ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ನಾಯಕ ನೌಕರರ ಸಂಘದ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾಭ್ಯಾಸವನ್ನು ಉದ್ಯೋಗಕ್ಕೋಸ್ಕರ ಸೀಮಿತ ಮಾಡಿಕೊಳ್ಳಬೇಡಿ. ಸಮಾಜದಲ್ಲಿ ಹುಟ್ಟಿದ ಮೇಲೆ ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಆಗ ಮಾತ್ರ ಸಾರ್ಥಕ ಬದುಕು ಕಾಣಲು ಸಾಧ್ಯ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ವಾಣಿಜ್ಯ ತೆರಿಗೆ ಉಪ ಆಯುಕ್ತ ಶ್ರೀಧರನಾಯಕ, ಶಾಸಕ ಅನಿಲ್ ಚಿಕ್ಕಮಾದು ತಾಯಿ ನಾಗಮ್ಮ, ತಾಲೂಕು ನಾಯಕ ನೌಕರರ ಸಂಘದ ಅಧ್ಯಕ್ಷ ಸಿದ್ದನಾಯಕ, ಉಪಾಧ್ಯಕ್ಷ ಚನ್ನನಾಯಕ, ಗೌರವಾಧ್ಯಕ್ಷ ಚಿಕ್ಕ ನಾಯಕ, ಸಹ ಕಾರ್ಯದರ್ಶಿ ನಾಗನಾಯಕ, ಖಜಾಂಚಿ ಚನ್ನನಾಯಕ, ಸಂಘಟನಾ ಕಾರ್ಯದರ್ಶಿ ವೆಂಕಟರಂಗ ನಾಯಕ, ಪುರಸಭಾ ಅಧ್ಯಕ್ಷೆ ಅನಿತಾ ನಿಂಗನಾಯಕ, ಸದಸ್ಯರಾದ ಸರೋಜಮ್ಮ, ನವೀನ, ಮಿಲ್ ನಾಗರಾಜು, ಜಿಲ್ಲಾ ನಾಯಕ ನೌಕರ ಸಂಘದ ಗೌರವಾಧ್ಯಕ್ಷ ಜಗದೀಶ್, ನಂಜುಂಡ ನಾಯಕ, ತಾಲೂಕು ನಾಯಕ ಸಂಘದ ಅಧ್ಯಕ್ಷ ದೊಡ್ಡನಾಯಕ ಇತರರಿದ್ದರು.