ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಜಯಕಾರ ಹೊಗಳಿಕೆ ಮುಖ್ಯವಲ್ಲ, ಬದುಕಿನಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾದ ರೀತಿ ಸದುಪಯೋಗಪಡಿಸಿಕೊಂಡು ಸೇವೆ ಮಾಡುವುದು ಬಹಳ ಮುಖ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಎಂ.ವಿ.ಎಂ.ಕನ್ವೆನ್ಷನ್ ಹಾಲ್‌ನಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಭಾನುವಾರ ಆಯೋಜಿಸಿದ್ದ 10ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೈಹಿಕ ಪೆಟ್ಟು ಸ್ವಲ್ಪ ದಿನಕ್ಕೆ ಮಾಯಾವಾಗುತ್ತದೆ. ಆದರೆ ಮಾನಸಿಕ ಪೆಟ್ಟು ಮರೆಯಲು ಆಗುವುದಿಲ್ಲ. ವಿದ್ಯಾರ್ಥಿಗಳು ತಂದೆ-ತಾಯಿ, ಗುರುಗಳು ಹಾಗೂ ಸಮಾಜವನ್ನು ಗೌರವಿಸಬೇಕು. ಉದ್ಯೋಗವೇ ಗುರಿಯಾಗಬಾರದು, ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿರಬೇಕು. ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಮಾದರಿ ಎನಿಸಿದೆ ಎಂದರು.
ನಾಡಪ್ರಭು ಕೆಂಪೇಗೌಡರು ನಿರ್ಮಾಣ ಮಾಡಿದ್ದ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ. ಒಂದು ಅಡಿ ಭೂಮಿ ತನ್ನದೇ ಆದ ಶಕ್ತಿ ಪಡೆದುಕೊಳ್ಳುತ್ತಿದೆ. ಯಾರೂ ಒಂದು ಅಡಿ ಭೂಮಿಯನ್ನು ಮಾರಾಟ ಮಾಡಬಾರದು. ಜತೆಗೆ ನೆಲಮಂಗಲ ಕ್ಷೇತ್ರಕ್ಕೆ ಅಂತರ್ಜಲಮಟ್ಟ ಹೆಚ್ಚಳ, ಮೆಟ್ರೋ ಸೇವೆ ಸೇರಿ ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ಸೇರಿಸುವ ಮಹತ್ವ ಕಾರ್ಯವನ್ನು ಶಾಸಕರನ್ನು ನನ್ನ ಬಳಿ ಮನವಿ ಮಾಡಿದ್ದು, ಆದಷ್ಟು ಬೇಗಾ ಈಡೇರಸಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಸಂಸದ ಡಾ.ಕೆ.ಸುಧಾಕರ್ ಕೂಡ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರ್ಪಡೆ ಮಾಡಬೇಕೆಂದು ಪತ್ರ ವ್ಯವಹಾರ ಮಾಡುತ್ತಿದ್ದಾರೆ. ಸೋಲೂರು ನೆಲಮಂಗಲಕ್ಕೆ ಸೇರಿಸುವ ಕೀರ್ತಿ ಶಾಸಕ ಶ್ರೀನಿವಾಸ್ ಸಲ್ಲುತ್ತದೆ ಎಂದರು.
ವಿಶ್ವ ಒಕ್ಕಲಿಗ ಮಠದ ಶ್ರೀಕುಮಾರಚಂದ್ರಶೇಖರನಾಥ ಸ್ವಾಮೀಜಿ, ಶಿವಾನಂದ ಆಶ್ರಮದ ಶ್ರೀ ರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಪ್ರಕಾಶ್, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ, ಸದಸ್ಯ ಬಿ.ಜಿ.ವಾಸು, ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜ್,ಉಪಾಧ್ಯಕ್ಷ ಸೈದಾಮಿಪಾಳ್ಯರಮೇಶ್, ಖಜಾಂಚಿ ಸುಂದರೇಶ್, ಸಂಸ್ಥಾಪಕ ಅಧ್ಯಕ್ಷ ಮಧುಸೂಧನ್, ಮಾಜಿ ಅಧ್ಯಕ್ಷ ಎಚ್.ಜಿ.ರಾಜು, ಚನ್ನಪ್ಪ, ನಗರಸಭೆ ಸದಸ್ಯ ಶಿವಕುಮಾರ್, ಹೆಚ್ಚುವರಿ ಸದಸ್ಯ ಅಂಜನಮೂರ್ತಿ, ಕಾಂಗ್ರೇಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಅಧ್ಯಕ್ಷ ಟಿ.ನಾಗರಾಜು, ಮುಖಂಡ ಸಿ.ಎಂ.ಗೌಡ, ಚಿಕ್ಕಹನುಮೇಗೌಡ, ದೇವರಾಜು, ಮಿಲ್ಟ್ರಿ ಮೂರ್ತಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ: ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ತಾಲೂಕಿನಾದ್ಯಂತ 500ಕ್ಕೂ ಹೆಚ್ಚು ಮಂದಿ ದ್ವಿತೀಯ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಸಂಘ-ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಸಮುದಾಯದವರನ್ನು ಸನ್ಮಾನಿಸಲಾಯಿತು.
ವಿದ್ಯೆಯ ಜತೆ ವಿನಯ ಮೈಗೂಡಿಸಿಕೊಂಡಲ್ಲಿ ಸಾಧನೆ ಮಾಡಲು ಸಹಾಯ ವಾಗುತ್ತದೆ. ಇತ್ತೀಚೆಗೆ ಮಕ್ಕಳು ಯಂತ್ರಗಳಂತೆ ವರ್ತನೆ ಮಾಡುತ್ತಿದ್ದು, ಪಾಲಕರು ಎಚ್ಚರಿಕೆ ವಹಿಸಬೇಕಿದೆ. ತಾಲೂಕಿನಲ್ಲಿ ಬಹುಸಂಖ್ಯಾತ ಒಕ್ಕಲಿಗರಿದ್ದು ಭವನ ನಿರ್ಮಾಣದ ಜತೆಗೆ ಕೆಂಪೇಗೌಡ ಪ್ರತಿಮೆ ಮಾಡಬೇಕು ಮಾಡಬೇಕಿದೆ.ಶ್ರೀನಂಜಾವಧೂತ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನ ಮಠ