ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ಆಯೋಜಿಸಿರುವ ಎಜುಕೇಶನ್ ಎಕ್ಸ್ ಪೋ ನಲ್ಲಿ ಮಾಹಿತಿ ಪಡೆಯುತ್ತಿರುವ ಪಾಲಕರು ಹಾಗೂ ವಿದ್ಯಾರ್ಥಿಗಳು. 
ನ್ಯೂಸ್

ಉತ್ತಮ ವೇದಿಕೆಯಾಯ್ತು ವಿಜಯವಾಣಿ ಎಕ್ಸ್‌ಪೋ

ಮೈಸೂರು : ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿ ವಾಹಿನಿ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ಎಜುಕೇಶನ್ ಎಕ್ಸ್‌ಪೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನಗರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಆಗಮಿಸಿದ ಪಾಲಕರು ತಮ್ಮ ಮಕ್ಕಳ ಜತೆ ಮೇಳಕ್ಕೆ ಆಗಮಿಸಿ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಎಕ್ಸ್‌ಪೋದಲ್ಲಿ ಭಾಗವಹಿಸಿರುವ ವಿವಿಧ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಸಹ ಎಕ್ಸ್‌ಪೋ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಇದೊಂದು ಉತ್ತಮ ವೇದಿಕೆ. ಇಂತಹ ಪ್ರದರ್ಶನಗಳು ಇನ್ನೂ ಹೆಚ್ಚೆಚ್ಚು ಆಯೋಜನೆಗೊಳ್ಳಬೇಕು. ಇಂತಹ ಮೇಳಗಳಿಂದ ಕೋರ್ಸ್‌ಗಳ ಆಯ್ಕೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಇರುವ ಗೊಂದಲ ನಿವಾರಣೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಒಂದೇ ಸೂರಿನಡಿ ಹಲವು ಕಾಲೇಜು
ಮಕ್ಕಳಿಗಿಂತ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಎಕ್ಸ್‌ಪೋಗೆ ಭೇಟಿ ನೀಡಿದ್ದಾರೆ. ಒಂದೇ ಸೂರಿನಡಿ ಹಲವು ಕಾಲೇಜುಗಳು ಭಾಗವಹಿಸಿರುವ ಹಿನ್ನೆಲೆಯಲ್ಲಿ ಒಂದೇ ಕಡೆ ಹೆಚ್ಚು ಮಾಹಿತಿ ಸಿಕ್ಕಿದೆ. ವಿದ್ಯಾರ್ಥಿಗಳೂ ಭೇಟಿ ನೀಡಿದ್ದು, ತಮ್ಮ ನೆಚ್ಚಿನ ಕೋರ್ಸ್‌ಗಳ ಬಗ್ಗೆ ವಿಚಾರಣೆ ಮಾಡಿದ್ದಾರೆ.
ಎಚ್.ಜಿ.ಶ್ರುತಿ ಸಹಾಯಕ ಪ್ರಾಧ್ಯಾಪಕಿ, ಎಟಿಎಂಇ ಇಂಜಿನಿಯರಿಂಗ್ ಕಾಲೇಜು, ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿ
ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚೆಚ್ಚು ಆಸಕ್ತಿ ಇದೆ. ಎರಡು ದಿನ ನಡೆದ ಎಕ್ಸ್‌ಪೋಗೆ ಪಾಲಕರು ಸಹ ಹೆಚ್ಚು ಭೇಟಿ ನೀಡಿದ್ದರು. ಮೈಸೂರಿನಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ತೆರೆಯುವ ಬಗ್ಗೆ ಸಲಹೆ ನೀಡಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ‘ವಿಜಯವಾಣಿ’ ವತಿಯಿಂದ ನಡೆಸಿದ ಎಕ್ಸ್‌ಪೋ ಉತ್ತಮ ವೇದಿಕೆಯಾಗಿದೆ.
ರಾಘವೇಂದ್ರ ಸಂಚಾಲಕ, ಸೃಷ್ಟಿ ಐಎಎಸ್ ಮತ್ತು ಕೆಎಎಸ್ ಅಕಾಡೆಮಿ, ಧಾರವಾಡ

ಉತ್ತಮ ಸ್ಪಂದನೆ ವ್ಯಕ್ತ

ಸಂಗೀತ ವಿವಿ ಇದೆ ಎಂಬುದು ರಾಜ್ಯ ಇರಲಿ, ಮೈಸೂರಿನ ಜನರಿಗೂ ಸರಿಯಾಗಿ ತಿಳಿದಿಲ್ಲ. ಹೀಗಾಗಿ, ಇಂತಹ ಮೇಳಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸಂಗೀತ ವಿವಿ ಎಂದರೆ ರಿಯಾಲಿಟಿ ಶೋ ನಡೆಸುವ ಸಂಸ್ಥೆ ಅಂದುಕೊಂಡಿದ್ದರು. ನಮ್ಮಲ್ಲೂ ಕೋರ್ಸ್‌ಗಳಿಗೆ ಎಂಬ ಮಾಹಿತಿಯನ್ನು ಜನರಿಗೆ ತಿಳಿಸಿದ್ದೇವೆ. ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ.

ನಾರಾಯಣಸ್ವಾಮಿ ನಾಟಕ ವಿಭಾಗದ ಉಪನ್ಯಾಸಕ, ಸಂಗೀತ ವಿವಿ, ಮೈಸೂರು

ಮಾಹಿತಿ ನೀಡಲು ಸಹಕಾರಿ
ಶಿಕ್ಷಣ ಸಂಸ್ಥೆಗಳು ಹೊಂದಿರುವ ವಿಶಿಷ್ಟ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಇಂತಹ ಮೇಳಗಳು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಉತ್ತಮ ಅವಕಾಶ ಕಲ್ಪಿಸಿದೆ.
ಮಂಜುನಾಥ್ ಮುಖ್ಯಸ್ಥ, ರತ್ನ ಗ್ರೂಪ್ ಆಫ್ ಇನ್‌ಸ್ಟಿಟೂಷನ್, ಮೈಸೂರು

ಫ್ಯಾಶನ್ ಬಗ್ಗೆ ಹೆಣ್ಣುಮಕ್ಕಳಿಗೆ ಆಸಕ್ತಿ
ಫ್ಯಾಶನ್ ಡಿಸೈನಿಂಗ್ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಇದೆ. ಮುಖ್ಯವಾಗಿ ಹೆಣ್ಣುಮಕ್ಕಳು ಫ್ಯಾಶನ್ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ತುಂಬ ಮಕ್ಕಳಿಗೆ ಫ್ಯಾಶನ್ ಡಿಸೈನ್ ಕೋರ್ಸ್, ಕಾಲೇಜುಗಳ ಬಗ್ಗೆ ಮಾಹಿತಿ ಇಲ್ಲ. ಇಂತಹ ಮೇಳಗಳು ಮಾಹಿತಿ ನೀಡಲು ಸಹಕಾರಿಯಾಗಿವೆ.
ನಿಶ್ಚಿತಾ ಉಪನ್ಯಾಸಕಿ, ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್, ಮೈಸೂರು

ದೊಡ್ಡ ಮಟ್ಟದಲ್ಲಿ ಆಯೋಜಿಸಿ
ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ಆಯೋಜಿಸಿದ್ದ ಎಕ್ಸ್‌ಪೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಕ್ಕಳಿಗೆ ಬೇಕಾದ ಕೋರ್ಸ್‌ಗಳ ಬಗ್ಗೆ ಮಾಹಿತಿ ಕೊರತೆ ಇರುತ್ತದೆ. ಇಂತಹ ಮೇಳದಿಂದ ಅವರ ಅನುಮಾನ, ಆತಂಕಗಳು ದೂರವಾಗುತ್ತವೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ಆಯೋಜಿಸಿದರೆ ಅನುಕೂಲವಾಗುತ್ತದೆ.
ಶಿಲ್ಪಶ್ರೀ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ, ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳು, ಮೈಸೂರು

ಮಾಹಿತಿ ಪಡೆಯಲು ಉತ್ತಮ ವೇದಿಕೆ
ಎಕ್ಸ್‌ಪೋಗೆ ಭೇಟಿ ನೀಡುವ ಪಾಲಕರು ಹಾಗೂ ಮಕ್ಕಳಿಗೆ ಸಂಪೂರ್ಣ ಮಾಹಿತಿ ಪಡೆಯಲು ಇದೊಂದು ಉತ್ತಮ ವೇದಿಕೆ. ಒಂದು ಒಳ್ಳೆಯ ಪರಿಸರದಲ್ಲಿ ಮೇಳ ಆಯೋಜಿಸಿರುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಪ್ರತಿ ವರ್ಷ ಇಂತಹ ಮೇಳ ಆಯೋಜನೆಗೊಳ್ಳಬೇಕು.
ವಿದ್ಯಾ ಸಹಾಯಕ ಪ್ರಾಧ್ಯಾಪಕಿ, ಎಸ್‌ಡಿಎಂ ಕಾಲೇಜು