ಮುತ್ತಿನಕೊಪ್ಪ ಗ್ರಾಮದ ಮಲ್ಲಿಕೊಪ್ಪದ ಶತಾಯುಷಿ ಗೌರಮ್ಮ ಅವರನ್ನು ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಸನ್ಮಾನಿಸಲಾಯಿತು. ಕೊನೋಡಿ ಗಣೇಶ್, ಬಿ.ಕೆ.ನಾರಾಯಣಸ್ವಾಮಿ, ಅನಂತ ಕೃಷ್ಣ, ಅನ್ನಪೂರ್ಣ, ಎಸ್.ಎನ್.ಸುರೇಶ್ ಇತರರಿದ್ದರು. 
ನ್ಯೂಸ್

ಉತ್ತಮ ಜೀವನಶೈಲಿಯಿಂದ ಆರೋಗ್ಯ ವೃದ್ಧಿ

ಎನ್.ಆರ್.ಪುರ: ಬ್ರಾಹ್ಮಣರ ಆಹಾರ ಪದ್ಧತಿಯಿಂದಾಗಿ ಆಯುಷ್ಯ ವೃದ್ಧಿಸುತ್ತದೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೊನೋಡಿ ಗಣೇಶ್ ತಿಳಿಸಿದರು. ಮುತ್ತಿನಕೊಪ್ಪ ಗ್ರಾಮದ ಮಲ್ಲಿಕೊಪ್ಪದ ಶತಾಯುಷಿ ಗೌರಮ್ಮ ಅವರಿಗೆ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಗೌರಮ್ಮ ಶತಾಯುಷಿಯಾಗಿ ಆರೋಗ್ಯವಾಗಿದ್ದಾರೆ. ಅವರ ಜೀವನ ಶೈಲಿ ಮಾದರಿ ಎಂದರು. ತಾಲೂಕು ಬ್ರಾಹ್ಮಣ ಮಹಾಸಭಾ ಗೌರವಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಶತಾಯುಷಿ ಗೌರಮ್ಮ ಅವರು ಬ್ರಾಹ್ಮಣ ಸಮಾಜದ ಹೆಮ್ಮೆಯಾಗಿದ್ದಾರೆ ಎಂದು ಹೇಳಿದರು. ಗೌರಮ್ಮ ಅವರ ಪುತ್ರ ಅನಂತಕೃಷ್ಣ ಮಾತನಾಡಿ, ನನ್ನ ತಾಯಿ ಗೌರಮ್ಮ ಕಷ್ಟಪಟ್ಟು ಶಿಸ್ತುಬದ್ಧ ಜೀವನ ನಡೆಸಿದ್ದಾರೆ ಎಂದರು. ತಾಲೂಕು ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷೆ ಅನ್ನಪೂರ್ಣ ಸನ್ಮಾನ ಪತ್ರ ವಾಚನ ಮಾಡಿದರು. ನಿರ್ದೇಶಕಿ ಗೀತಾ ರವಿಶಂಕರ್, ಕೆರೆಮನೆ ತಿಮ್ಮಪ್ಪಯ್ಯ, ಮಹಾಸಭಾದ ಕಾರ್ಯದರ್ಶಿ ಎಸ್.ಎನ್.ಸುರೇಶ್, ಖಜಾಂಚಿ ಅಭಿಷೇಕ್ ಇದ್ದರು