ನ್ಯೂಸ್

*ಉಡುಪಿಯಲ್ಲಿ ಮುಂದುವರಿದ ಕರೊನಾ ಆರ್ಭಟ *ಮತ್ತೆ 27 ಪಾಸಿಟಿವ್ ದೃಡ*

ಉಡುಪಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದೆ.‌ ಗುರುವಾರ 27 ಕರೊನಾ ಪಾಸಿಟಿವ್ ದೃಡಪಟ್ಟಿದೆ.‌24 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಇನ್ನುಳಿದಂತೆ ಇಬ್ಬರು ತೆಲಂಗಾಣದಿಂದ. ಒಬ್ಬರು ಕೇರಳದಿಂದ ಬಂದು ಸರ್ಕಾರಿ ಕ್ವಾರಂಟೈನ್ ನಲ್ಲಿದ್ದರು. ಸೋಂಕಿತರನ್ನು ಕೋವಿಡ್-19 ವಿಶೇಷ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.‌ ಇವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ರಾಜ್ಯ ಸರ್ಕಾರ ಬುಧವಾರ ರಾತ್ರಿ ಹೊರಡಿಸಿದ ಹೊಸ ಮಾರ್ಗಸೂಚಿ ಪ್ರಕಾರ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದವರು 7 ದಿನ ಬಳಿಕ ಯಾವುದೇ ಅನಾರೋಗ್ಯ ಲಕ್ಷಣ ಇಲ್ಲದಿದ್ದಲ್ಲಿ ಅವರನ್ನು ಮನೆಗೆ ಕಳಿಸಬಹುದಾಗಿದೆ. ಸದ್ಯ ಜಿಲ್ಲೆಯಲ್ಲಿ ಹೊರ ರಾಜ್ಯ ಮತ್ತಯ ವಿದೇಶದಿಂದ ಬಂದ 7 ಸಾವಿರಕ್ಕೂ ಅಧಿಕ ಮಂದಿ ಕ್ವಾರಂಟೈನ್ ನಲ್ಲಿದ್ದಾರೆ.ಇದರಲ್ಲಿ ಹಲವಾರು ಮಂದಿ ಹೊಸ ಮಾರ್ಗಸೂಚಿಯಂತೆ ಮನೆಗೆ ತೆರಳುವ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ.