ನ್ಯೂಸ್

ಉಡುಪಿಗೆ ಕೋವಿಡ್ ಲಸಿಕೆ ಆಗಮನ

ಉಡುಪಿ: ಸಂಕ್ರಾಂತಿ ಶುಭದಿನದಂದು ಜಿಲ್ಲೆಗೆ ಸಿಹಿ ಸುದ್ದಿಯಾಗಿ ಕೋವಿಡ್ ಲಸಿಕೆ ಕೋವಿಶೀಲ್ಡ್ ಆಗಮಿಸಿದೆ. ಬುಧವಾರ ಬೆಳಗ್ಗೆ 11:50 ಕ್ಕೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ತಲುಪಿದ್ದು, ಸುರಕ್ಷಿತವಾಗಿ ಔಷಧ ದಾಸ್ತಾನು ಉಗ್ರಾಣದಲ್ಲಿ ಲಸಿಕೆಯನ್ನು ಇರಿಸಲಾಗಿದೆ.

ಜಿಲ್ಲೆಗೆ ಮೊದಲ ಹಂತದಲ್ಲಿ 12 ಸಾವಿರ ಲಸಿಕೆಗಳು ಆಗಮಿಸಿದೆ. ಮಂಗಳೂರು ಸರ್ಕಾರಿ ಔಷಧ ಉಗ್ರಾಣ ಕೇಂದ್ರದಿಂದ ಪೊಲೀಸ್ ಭದ್ರತೆಯಲ್ಲಿ ಲಸಿಕೆ ಉಡುಪಿ ಡಿಚ್ ಒ ಕಚೇ್ರಿಗೆ ತಲುಪಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ ಸಿಇಒ ಡಾ. ನವೀನ್ ಭಟ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್, ಡಾ.ಪ್ರೇಮಾನಂದ ಉಪಸ್ಥಿತರಿದ್ದರು.