ನ್ಯೂಸ್

ಉಚಿತ ಸಾಮೂಹಿಕ ವಿವಾಹ

ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಶ್ರೀ ಆದಿಚುಂಚನಗಿರಿ ಮಠದಲ್ಲಿ ನ.3ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐದನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು, ವರರಿಗೆ ಉಚಿತ ವಸ್ತ್ರ, ಚಿನ್ನದ ತಾಳಿ ಸೇರಿದಂತೆ ವಿವಾಹದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀ ಮಠ ನೋಡಿಕೊಳ್ಳಲಿದೆ.

ವಧು, ವರನ ಕಡೆಯವರು ಸೇರಿ 100 ಜನ ಪಾಲ್ಗೊಳ್ಳಬಹುದು. ವಿವಾಹದಲ್ಲಿ ಭಾಗಿಯಾಗುವವರಿಗೆ ಉಚಿತ ಊಟದ ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತದೆ. ವಿವಾಹವಾಗುವ ಜೋಡಿಗಳು ನೋಂದಣಿಗೆ ಆಧಾರ್ ಗುರುತು ತರುವುದು ಕಡ್ಡಾಯವಾಗಿರುತ್ತದೆ. ವರನಿಗೆ ಕನಿಷ್ಠ 21, ವಧುವಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ನೋಂದಣಿಯ ದಿನವೇ ವಧು, ವರರಿಗೆ ವಸ್ತ್ರಗಳನ್ನು ವಿತರಿಸಲಾಗುತ್ತದೆ. ನೋಂದಣಿಗೆ ಕಬ್ಬಳಿ ಆದಿಚುಂಚನಗಿರಿ ಶಾಖಾಮಠವನ್ನು ಸಂಪರ್ಕಿಸಬಹುದು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠ ಪ್ರಕಟಣೆಯಲ್ಲಿ ತಿಳಿಸಿದೆ.