ನ್ಯೂಸ್

ಉಚಿತ ಖೋ-ಖೋ ತರಬೇತಿ

ಮೈಸೂರು: ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಒಂದು ತಿಂಗಳ ಕಾಲ ಉಚಿತ ಖೋ-ಖೋ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಆದಿಚುಂಚನಗಿರಿ ರಸ್ತೆಯ ಕಾವೇರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏಪ್ರಿಲ್ 15 ರಿಂದ ಮೇ 15 ರವರೆಗೆ ಸಂಜೆ 4.30 ರಿಂದ 6 ಗಂಟೆ ವರೆಗೆ ನಡೆಯಲಿದೆ. 8 ವರ್ಷದಿಂದ 16 ವರ್ಷದೊಳಗಿನ ಮಕ್ಕಳು (ಬಾಲಕರು ಮತ್ತು ಬಾಲಕಿಯರು) ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 98452-20205 ಸಂಪರ್ಕಿಸಲು ಕೋರಲಾಗಿದೆ.