ಬೆಳಗಾವಿ: ಬೆಳಗಾವಿಯಲ್ಲಿ ಹತ್ತು ದಿನಗಳ ಅಧಿವೇಶನ ನಡೆದರೂ ಸರ್ಕಾರ ಕೇವಲ ಎರಡು ದಿನ ಉತ್ತರ ಕರ್ನಾಟಕದ ಕುರಿತು ಚರ್ಚೆ ನಡೆಸುತ್ತಿರುವುದು ಈ ಭಾಗದ ಬಗೆಗಿನ ತಾತ್ಸಾರ ಮನೋಭಾವ ಎದ್ದು ಕಾಣುತ್ತದೆ ಎಂದು ಬಿಜೆಪಿಯ ಅಭಯ ಪಾಟೀಲ ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಉತ್ತರ ಕರ್ನಾಟಕದ ಬಗೆಗೆ ಚರ್ಚೆ ನಡೆದರೂ ದಕ್ಷಿಣ ಕರ್ನಾಟಕದ ಶೇ. 60ರಷ್ಟು ಶಾಸಕರು ಸದನದಲ್ಲಿ ಹಾಜರಿರುವುದಿಲ್ಲ. ಜೊತೆಗೆ ಸುವಣಸೌಧ ಸಕ್ರೀಯವಾಗಿ ಕಾರ್ಯ ನಿರ್ವಹಿಸಬೇಕು ಎಂದರೆ ಇಲ್ಲಿ ವಿವಿಧ ಸಮಿತಿಗಳ ಸಭೆ ಆಗಬೇಕು, ವಿವಿಧ ಸಚಿವಾಲಯಗಳು ಇಲ್ಲಿಯೇ ಕಾರ್ಯ ನಿರ್ವಹಿಸಬೇಕು. ಆದರೆ, ಅದು ಆಗುತ್ತಿಲ್ಲ. ಒಂದು ರೀತಿಯಲ್ಲಿ ಸುವರ್ಣ ಸೌಧ ಎನ್ನುವುದು ಭೂತ ಬಂಗಲೇ ಆದಂತಾಗಿದೆ ಎಂದು ಇಲ್ಲಿಯ ಜನರು ವಾತನಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಮಟ್ಟದ ಕಚೇರಿಗಳು ಸುವರ್ಣ ಸೌಧದಲ್ಲಿ ಕೆಲಸ ನಿರ್ವಹಿಸಬೇಕು. ಆದರೆ, ಜಿಲ್ಲಾ ಮಟ್ಟದ 23 ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಮೂಲಕ ಇದನ್ನು ಮಿನಿ ವಿಧಾನಸೌಧ ಎನ್ನುವಂತೆ ವಾಡಲಾಗಿದೆ. ನಗರವನ್ನು ಬಿಟ್ಟು ಇಲ್ಲಿಗೆ ಬರಲು ಜನರು ಪರದಾಡುತ್ತಿದ್ದಾರೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆ ಒಂದೆಡೆಯಾದರೆ ಅದರಲ್ಲಿಯೇ ಬೆಳಗಾವಿಗೆ ಮತ್ತಷ್ಟು ಮಲತಾಯಿ ಧೋರಣೆ ತೋರಿಸಲಾಗುತ್ತಿದೆ.
ಬೆಳಗಾವಿಯಿಂದಲೇ ಸಾಕಷ್ಟು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಆದರೆ, ಅವರಿಗೆ ಸೂಕ್ತವಾದ ಕ್ರೀಡಾಂಗಣವಿಲ್ಲ. ಸುವಾರು 60 ಎಕರೆ ಸರಕಾರಿ ಜಾಗೆ ಇದೆ. ಅಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ನಿರ್ಮಿಸಿದರೆ ಕೇವಲ ಬೆಳಗಾವಿ ವಾತ್ರವಲ್ಲ ಬದಲಿಗೆ ಉತ್ತರ ಕರ್ನಾಟಕದ ಎಲ್ಲ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು. ಅಲ್ಲದೇ ಬೆಳಗಾವಿಯಲ್ಲಿ ಸುವಾರು 900 ಕೋಟಿ ವೆಚ್ಚದಲ್ಲಿ ಡ್ರೈನೇಜ್ ಆಗಬೇಕಿದೆ.
ಜೊತೆಗೆ ಬಳ್ಳಾರಿ ನಾಲಾ ಸಮಸ್ಯೆ ಹಿಂದಿನಿಂದಲೂ ಇದೆ. ಅದನ್ನು ಪರಿಹರಿಸುವಂತೆ ಆಗ್ರಹಿಸಿದರೂ ಈ ವರೆಗೆ ಆಗಿಲ್ಲ. ಇದಲ್ಲದೇ ಕಿದ್ವಾಯಿ ಆಸ್ಪತ್ರೆ ಬೆಳಗಾವಿಯಲ್ಲಿ ಸ್ಥಾಪನೆ ಆಗಬೇಕು. ಕೇವಲ ಬೆಳಗಾವಿ ಬಗೆಗೆ ವಾತನಾಡಿದರೆ ವಾತ್ರ ಸಾಲದು, ಕಾರ್ಯಗಳು ಅನುಷ್ಠಾನ ಆಗಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಕೈಗಾರಿಕೆ ಅಭಿವದ್ಧಿ ಆಗಬೇಕು ಎಂಬ ಅಭಯ ಪಾಟೀಲ ಮಾತಿಗೆ ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಹೊಸ ಕೈಗಾರಿಕೆ ಪ್ರಾರಂಭಿಸಲು ಮತ್ತು ಐಟಿ ಪಾರ್ಕ್ ವಾಡಲು ಸರಕಾರ ಸಿದ್ಧವಿದೆ. ಅದಕ್ಕಾಗಿ ಜಾಗೆ ನೋಡುವಂತೆ 6 ತಿಂಗಳಿಂದ ನಿಮಗೆ ಹೇಳುತ್ತಿದ್ದೇನೆ. ಈ ವರೆಗೆ ಜಾಗೆ ಹುಡುಕಿಲ್ಲ ಎಂದು ತಿರುಗೇಟು ನೀಡಿದರು. ಬಿಯಾಂಡ್ ಬೆಂಗಳೂರು ಎನ್ನುವುದನ್ನು ಕೇವಲ ಹುಬ್ಬಳ್ಳಿ ವರೆಗೆ ವಾತ್ರವೇ ವಾಡಲಾಗುತ್ತಿದೆ. ಆದರೆ, ಅದನ್ನು ಬೆಳಗಾವಿ ವರೆಗೆ ವಿಸ್ತರಿಸಬೇಕು. ಅದರಿಂದ ಈ ಭಾಗಕ್ಕೂ ಅನುಕೂಲವಾಗಲಿದೆ ಪಾಟೀಲ ಹೇಳಿದರು.