ನ್ಯೂಸ್

ಈವರೆಗೂ ೧೨ ಸಾವಿರಕ್ಕೂ ವಿವಿಧಜಾತಿ ಹೆಚ್ಚು ಹಾವುಗಳ ರಕ್ಷಣೆ / ಒಂದೇ ದಿನ ಎಂಟು ಹಾವು ಹಿಡಿದು ಆತಂಕ ದೂರ ಮಾಡಿದ ಸ್ನೇಕ್‌ರವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದ ಜಯನಗರದ ೪ನೇ ಕ್ರಾಸ್, ಮುನೇಶ್ವರ ನಗರ, ಕೀಲುಕೋಟೆ ಸೇರಿದಂತೆ ವಿವಿದೆಡೆ ಒಂದೇ ದಿನ ೮ ಹಾವುಗಳನ್ನು ಹಿಡಿದು ರಕ್ಷಿಸುವ ಮೂಲಕ ನಾಗರೀಕರ ಆತಂಕ ದೂರ ಮಾಡಿದ ಮುನೇಶ್ವರ ನಗರದ ಸ್ನೇಕ್ ರವಿ.

ನಗರದ ಜಯನಗರ ೪ನೇ ಕ್ರಾಸ್‌ನಲ್ಲಿ ಮನೆಯೊಂದರ ನೀರೆತ್ತುವ ಮೋಟಾರ್ ಸಮೀಪ ಸೇರಿಕೊಂಡಿದ್ದ ಬೃಹತ್ ಗಾತ್ರದ ಕೆರೆ ಹಾವನ್ನು ಹಾಗೂ ಕೀಲುಕೋಟೆಯ ವಕೀಲರೊಬ್ಬರ ಮನೆಯಲ್ಲಿ ನಾಗರಹಾವನ್ನು ಹಿಡಿದು ಬಾಟೆಲ್‌ಗೆ ತುಂಬಿ ಅದನ್ನು ಕಾಡಿನಲ್ಲಿ ಬಿಟ್ಟು ಹಾವುಗಳ ರಕ್ಷಣೆ ಜತೆಗೆ ನಾಗರೀಕರ ಆತಂಕವನ್ನು ಸ್ನೇಕ್ ರವಿ ದೂರ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರವಿ, ಹಾವುಗಳಿಗೂ ಬದುಕಲು ಹಕ್ಕಿದೆ. ಅದರಿಂದ ರೈತರಿಗೆ ನೆರವಾಗುತ್ತಿದೆ. ಇಲಿಗಳನ್ನು ಬಿಲದೊಳಗೆ ಹೋಗಿ ತಿಂದು ಬರುವ ಹಾವು ಆಹಾರ ಧಾನ್ಯ ಹಾಳಾಗುವುದನ್ನು ತಪ್ಪಿಸುತ್ತದೆ ಎಂದರು.

ಯಾರೇ ಆಗಲಿ ಹಾವು ಕಂಡ ಕೂಡಲೇ ನನಗೆ ದೂರವಾಣಿ ಕರೆ ಮಾಡಿದರೆ ತಕ್ಷಣ ಸ್ಥಳಕ್ಕೆ ಆಗಮಿಸಿ ಹಾವು ಹಿಡಿದು ಸುರಕ್ಷಿತವಾಗಿ ರಕ್ಷಿಸುವುದಾಗಿ ತಿಳಿಸಿದರು.

ನಗರದಲ್ಲಿ ಬೇಸಿಗೆಯ ಬಿಸಿಯಿಂದಾಗಿ ಹಾವುಗಳ ಸಂಖ್ಯೆ ಹೆಚ್ಚಾಗಿದ್ದು, ಬಿಸಿ ತಾಳಲಾಗದೇ ಅವು ಮನೆಗಳ ಬಳಿ ಹರಿದು ಬರುತ್ತಿವೆ. ಸೋಮವಾರ ಒಂದೇ ದಿನ ೮ ಹಾವು ಹಿಡಿದಿದ್ದು, ಮಧ್ಯರಾತ್ರಿಯೂ ಮನೆಯೊಂದರಲ್ಲಿ ಅವಿತಿದ್ದ ಹಾವನ್ನು ಹಿಡಿದು ನಾಗರೀಕರ ಆತಂಕ ದೂರ ಮಾಡಿದ್ದಾಗಿ ತಿಳಿಸಿದರು.

ಚಿತ್ರ ೧೨ ಕೆ.ಎಲ್.ಆರ್. ೦೩ : ಕೋಲಾರ ಜನನಗರ ೪ನೇ ಕ್ರಾಸ್‌ನಲ್ಲಿ ಮನೆಯೊಂದರ ಆವರಣದಲ್ಲಿ ಸೇರಿಕೊಂಡಿದ್ದ ಹಾವನ್ನು ಹಿಡಿದು ರಕ್ಷಿಸಿದ್ದಲ್ಲದೇ ಈ ಭಾಗದ ಮನೆಗಳವರ ಆತಂಕವನ್ನು ದೂರ ಮಾಡಿದ ಸ್ನೇಕ್ ರವಿ ಹಾವನ್ನು ಬಾಟೆಲ್‌ಗೆ ತುಂಬಿ ಕಾಡಿಗೆ ಸಾಗಿಸಿದರು.