ನ್ಯೂಸ್

ಈರುಳ್ಳಿ ವಿಮಾ ನೋಂದಣಿ ಡಿ.30 ಕೊನೆ ದಿನ

ಚಿತ್ರದುರ್ಗ:ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಈರುಳ್ಳಿ ನೀರಾವರಿ ಬೆಳೆಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿ ಮಾ ಯೋಜನೆಯಡಿ ಡಿಸೆಂಬರ್ 30ರೊಳಗೆ ಬೆಳೆ ವಿಮೆ ನೋಂದಾಯಿಸಬೇಕಿದೆ. ಚಿತ್ರದುರ್ಗ ತಾಲೂಕು ಕಸಬಾ ಹಾಗೂ ತುರುವ ನೂರು,ಚಳ್ಳಕೆರೆ ಕಸಬಾ ಹಾಗೂ ತಳಕು, ಹಿರಿಯೂರಿನ ಐಮಂಗಲ ಹಾಗೂ ಜೆ.ಜಿ.ಹಳ್ಳಿ ಹೋಬಳಿಗಳಿಗೆ ಈರುಳ್ಳಿ ನೀರಾವರಿ ಬೆಳೆಯನ್ನು ಅಧಿಸೂಚಿಸಲಾಗಿದೆ. ಶೇ.90 ಇಂಡೆಮ್ನಿಟಿ ಮಟ್ಟದ ನೀರಾವರಿ ಈರುಳ್ಳಿ ವಿಮೆ ಮೊತ್ತ ಹೆಕ್ಟೇರ್‌ಗೆ 80500 ರೂ.ಇದ್ದು,ಇದರ ಶೇ.5ರಂತೆ ವಿಮಾ ಕಂತು 4025 ರೂ.ಇದೆ. ದಿ ಓರಿಯಂಟಲ್ ಇನ್ಶುರೆನ್ಸ್ ವಿಮಾ ಕಂಪನಿಯಾಗಿ ಜಿಲ್ಲೆಗೆ ನಿಗದಿಯಾಗಿದೆ. ರೈತರು ಬ್ಯಾಂಕ್,ಸಾ ಮಾನ್ಯ ಸೇವಾ ಕೇಂದ್ರ ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ಬ್ಯಾಂಕ್‌ಗಳನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಡಿಡಿ ಸವಿತಾ ತಿಳಿಸಿದ್ದಾರೆ.