ಪ್ರವಾಸಕ್ಕೆ ತೆರಳಿದ್ದ ವೇಳೆ ಮಂಗಳೂರು ಹೊರ ವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್‌ನ ಈಜು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಮೈಸೂರಿನ ಕುರುಬಾರಹಳ್ಳಿಯ ಎಂ.ಡಿ.ನಿಶಿತಾ, ಕೆ.ಆರ್.ಮೊಹಲ್ಲಾದ ಪಾರ್ವತಿ, ದೇವರಾಜ ಮೊಹಲ್ಲಾದ ಕೀರ್ತನಾ ಬಾಲ್ಯ ಸ್ನೇಹಿತೆಯರು ಆಗಿದ್ದರು.
ಸದ್ಯ ಮೈಸೂರಿನ ಮೇಟಗಳ್ಳಿಯಲ್ಲಿರುವ ಜಿಎಸ್‌ಎಸ್‌ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದಲ್ಲಿ ಬಿ.ಇ. ವ್ಯಾಸಂಗ ಮಾಡುತ್ತಿದ್ದರು.
ವಾರಾಂತ್ಯ ರಜೆ ಸಿಕ್ಕಿದ್ದರಿಂದ ಎರಡು ದಿನಗಳ ಕಾಲ ಮಂಗಳೂರಿಗೆ ಪ್ರವಾಸ ಕೈಗೊಂಡಿದ್ದ ಮೂವರು, ಶುಕ್ರವಾರ ರಾತ್ರಿ ರೈಲಿನಲ್ಲಿ ಮೈಸೂರಿನಿಂದ ಪ್ರಯಾಣ ಬೆಳೆಸಿದ್ದರು.