ಮೇಷ: ಗುರಿಸಾಧನೆಗೆ ಹೊಸ ಯೋಜನೆ ರೂಪಿಸಿ. ಕೆಲಸದಲ್ಲಿ ಯಶಸ್ಸು ಲಭಿಸಲಿದೆ. ಆರ್ಥಿಕವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಆದೀತು. ಶುಭಸಂಖ್ಯೆ: 9
ವೃಷಭ: ಪಾಲುದಾರಿಕೆಯಲ್ಲಿ ಮೋಸ ಹೋಗುವಿರಿ. ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೇ. ಚಿನ್ನಾಭರಣಗಳ ಖರೀದಿ ಯೋಗ ಸ್ತ್ರೀಯರಿಗೆ ಇದೆ. ಶುಭಸಂಖ್ಯೆ: 1
ಮಿಥುನ: ವಿಲಾಸಕ್ಕೆ ಅಪವ್ಯಯ. ವಿದ್ಯಾರ್ಥಿಗಳು ಮಹಾತ್ವಕಾಂಕ್ಷಿಗಳಾಗಿ. ಕಲಾವಿದರಿಗೆ ಪ್ರಯಾಣ ಸಾಧ್ಯತೆ. ಅವಿವಾಹಿತರಿಗೆ ಸಿಹಿಸುದ್ದಿ. ಶುಭಸಂಖ್ಯೆ: 8
ಕಟಕ: ಕುಟುಂಬ ಸದಸ್ಯರಲ್ಲಿ ಸ್ವೇಚ್ಛಾಚಾರ. ವ್ಯಾಪಾರಸ್ಥರಿಗೆ ಪ್ರಗತಿ. ಕಚೇರಿಯಲ್ಲಿ ಕುಟಿಲತೆಯಿಂದ ತೊಂದರೆ. ಸಜ್ಜನರ ಸಖ್ಯ ಬೆಳೆಸಿ. ಶುಭಸಂಖ್ಯೆ: 3
ಸಿಂಹ: ಆದಾಯಕ್ಕಿಂತ ಖರ್ಚು ಅಧಿಕವಾಗಬಹುದು. ಪ್ರತಿಭಾನ್ವಿತರಿಗೆ ಪುರಸ್ಕಾರ. ಅಧಿಕಾರ ಗ್ರಹಣದಲ್ಲಿ ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 5
ಕನ್ಯಾ: ನೌಕರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಖರೀದಿಯಲ್ಲಿ ಮೋಸ ಸಾಧ್ಯತೆ. ಸಜ್ಜನರ ಸಾನ್ನಿಧ್ಯ ಸಿಗುತ್ತದೆ. ಶುಭಸಂಖ್ಯೆ: 7
ತುಲಾ: ಕಾರ್ಯನಿಮಿತ್ತ ತಿರುಗಾಟ. ಬಡ್ತಿ ಸಾಧ್ಯತೆ. ಅದೃಷ್ಟದ ಅನುಭವ. ಕುಟುಂಬದಲ್ಲಿ ವಿವಾಹ ನಿಶ್ಚಯ. ಶಿಕ್ಷಕರ ಜೀವನದಲ್ಲಿ ಪ್ರಗತಿ. ಶುಭಸಂಖ್ಯೆ: 4
ವೃಶ್ಚಿಕ: ಆರ್ಥಿಕ ಸಮಸ್ಯೆ ತಲೆದೋರಲಿದೆ. ಉದ್ಯೋಗ ವ್ಯವಹಾರದಲ್ಲಿ ಅಸ್ಥಿರತೆ. ನಿರ್ಣಾಯಕ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ: 5
ಧನುಸ್ಸು: ಮಂಗಲ ಕಾರ್ಯ ನಿಮಿತ್ತ ಪ್ರವಾಸ ಸಾಧ್ಯತೆ. ಕಚೇರಿಯಲ್ಲಿ ಪ್ರತಿಷ್ಠೆಗೆ ಧಕ್ಕೆ ಆಗಬಹುದು. ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಶುಭಸಂಖ್ಯೆ: 6
ಮಕರ: ಅಹಂಕಾರ ಭಾವನೆಯಿಂದ ತೊಂದರೆ. ಹಿರಿಯರೊಂದಿಗೆ ಮನಸ್ತಾಪ. ಸಂತಾನ ಅಪೇಕ್ಷೆಗಳಿಗೆ ಶುಭ ಸುದ್ದಿ. ವೃಥಾ ತಿರುಗಾಟ. ಶುಭಸಂಖ್ಯೆ: 3
ಕುಂಭ: ವಿದ್ಯಾರ್ಥಿಗಳಿಗೆ ಯಶಸ್ಸು. ಕಷ್ಟ ಜೀವಿಗಳಿಗೆ ಧನಲಾಭ. ವ್ಯಾಪಾರದಲ್ಲಿ ಸ್ಪರ್ಧೆ ಏರ್ಪಡಲಿದೆ. ಸ್ತ್ರೀಯರಿಗೆ ಆಭರಣ ಲಾಭ. ಶುಭಸಂಖ್ಯೆ: 2
ಮೀನ: ಮಿತ್ರರ ಜೊತೆ ವಾದ ವಿವಾದ. ಉಪನ್ಯಾಸಕರಿಗೆ ಬಡ್ತಿ ಸಾಧ್ಯತೆ. ಅದೃಷ್ಟದಿಂದ ಸಮಸ್ಯೆ ಪರಿಹಾರ. ನೂತನ ನಿವೇಶನ ಖರೀದಿ. ಶುಭಸಂಖ್ಯೆ: 9