ನ್ಯೂಸ್

ಇಂದು ನಗರಸಭೆ ಅಧಿಕಾರಿಗಳ ಶಕ್ತಿ ಪ್ರದರ್ಶನ?

  • ಹೊಸಪೇಟೆಯಲ್ಲಿ ಪೌರಾಕಾರ್ಮಿಕ ದಿನಾಚರಣೆ
  • ನಗರಸಭೆ ಅಧಿಕಾರಿಗಳಿಂದಲ್ಲೇ ನಿಷೇಧಿತ ಪ್ಲಾಸ್ಟಿಕ್ ಬ್ಯಾನರ್ ಅಳವಡಿಕೆ

ಹೊಸಪೇಟೆ: ನಗರದಲ್ಲಿ ಸೋಮವಾರ ನಡೆಯುವ ಜಿಲ್ಲಾ ಮಟ್ಟದ ಪೌರಾಕಾರ್ಮಿಕ ದಿನಾಚರಣೆ ಸರ್ಕಾರದಿಂದಲೋ ಅಥವ ಖಾಸಗಿ ಸಂಘ ಸಂಸ್ಥೆಯಿAದ ನಡೆಯುತ್ತಿದೆಯೋ ಗೊತ್ರಿಲ್ಲ. ಇಲ್ಲಿನ ಊರು ತುಂಬ ಅಧಿಕಾರಿಗಳ ವರ್ಗ ಬ್ಯಾನರ್‌ಗಳಲ್ಲಿ ರಾರಾಜಿಸುತ್ತಿರುವುದು ಒಂದೆಡೆಯಾದರೆ, ಜನರಲ್ಲಿ ಜಾಗೃತಿ ಮೂಡಿಸುವ ನಗರಸಭೆ ಅಧಿಕಾರಿಗಳೆ ತಮ್ಮ ಭಾವಚಿತ್ರ ಇರುವ ಪ್ಲಾಸ್ಟಿಕ್ ಬ್ಯಾನರ್‌ಗಳನ್ನು ನಗರದ ಪ್ರಮುಖ ಸ್ಥಳಗಳಲ್ಲಿ ಹಾಕಿಕೊಂಡಿದ್ದು ಪ್ರಜ್ಞಾವಂತರ ಅಕ್ರೋಶಕ್ಕೆ ಕಾರಣವಾಗಿದೆ.

ಈ ಹೀಂದೆ ನಗರಸಭೆ ಪೌರಾಯುಕ್ತ. ಸಿ.ಚಂದ್ರಪ್ಪ ಹಾಗೂ ನಗರಸಭೆ ಚುನಾಯಿತ ಸದಸ್ಯರ ನಡುವೆ ಕುಡಿವ ನೀರು ಖಾಸಗಿ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ವಿಚಾರದಲ್ಲಿ ಜಗಳವಾಗಿತ್ತು. ನಂತರ ನಗರದಲ್ಲಿ ಬಾಲಕನೋರ್ವ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಸದಸ್ಯರು ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸದಸ್ಯರ ವಿರುದ್ಧ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಂದಿನಿAದ ಇಲ್ಲಿಯವರೆಗೆ ಆಡಳಿತ ವ್ಯವಸ್ಥೆಯಲ್ಲಿ ಜನರ ಸೇವೆ ಮಾಡಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಒಳ ಜಗಳದಲ್ಲಿ ಸಾರ್ವಜನಿಕ ಕೆಲ ಕಾರ್ಯ ಆಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಇನ್ನೂ ಸೋಮವಾರ ನಡೆಯುವ ಪೌರಾಕಾರ್ಮಿಕ ದಿನಾಚರಣೆ ಹಮ್ಮಿಕೊಂಡಿದ್ದು, ಇದರಲ್ಲಿ ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಅಧಿಕಾರಿಗಳೆ ಬ್ಯಾನರ್‌ನಲ್ಲಿ ರಾರಾಜಿಸುತ್ತಿದ್ದಾರೆ. ಇದರಿಂದ ನಗರಸಭೆಯಲ್ಲಿ ಶೀತಲ ಸಮರ ಮುಂದುವರೆಯುತ್ತಿದೆ. ಸೋಮವಾರ ನಡೆಯುವ ಕಾರ್ಮಿಕ ದಿನಾಚರಣೆಯಲ್ಲಿ ಅಧಿಕಾರಿಗಳಿಂದ ನಗರಸಭೆ ಸದಸ್ಯರ ವಿರುದ್ಧ ಶಕ್ತಿ ಪ್ರದರ್ಶನ ನಡೆಯಲಿದೆ ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚೆ ಆಗುತ್ತಿದೆ.

ನಿಷೇಧಿತ ಬ್ಯಾನರ್ ಅಳವಡಿಕೆ

ಉತ್ಸವ, ಹಬ್ನ ಹರಿದಿನ ಸೇರಿದಂತೆ ಇತರೆ ವಿಶೇಷ ಧಿನಗಳಲ್ಲಿ ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಕೆ ಸಾರ್ವಜನಿಕರು ಹಾಕುವುದು ಸಾಮಾನ್ಯವಾಗಿದೆ. ಅನುಮತಿಗಾಗಿ ಸ್ಥಳೀಯ ಆಡಳಿತಗಳು ನೂರೆಂಟು ನಿಯಮಗಳು ಪಾಲಿಸಲು ಹೇಳುತ್ತಾರೆ. ಇನ್ನೂ ನಿಷೇಧಿತ ಪ್ಲಾಸ್ಟಿಕ್ ವಿರುದ್ಧ ಅಧಿಕಾರಿಗಳೆ ದಂಡ ಹಾಕುತ್ತಾರೆ. ಆದರೆ, ಇಲ್ಲಿನ ನಗರಸಭೆ ಅಧಿಕಾರಿಗಳೆ ನಿಷೇಧಿತ ಪ್ಯಾಸ್ಟಿಕ್ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಸರ್ಕಾರ ಪ್ಲಾಸ್ಟಿಕ್ ಬ್ಯಾನರ್‌ಗಳನ್ನು ಅಳವಡಿಸುವಂತಿಲ್ಲ. ಕಡ್ಡಾಯವಾಗಿ ಬಟ್ಟೆ ಬ್ಯಾನರ್‌ಗಳನ್ನು ಬಳಸಬೇಕು ಎಂದು ಕಟ್ಟುನಿಟ್ಟಿನ ಆದೇಶಕ್ಕೆ ಅಧಿಕಾರಿಗಳಿಂದ ಪಾಲನೆಯಾಗುತ್ತಿಲ್ಲ. ಜನರಿಗೆ ಒಂದು ನಿಯಮ ಆಧಿಕಾರಿಗಳಿಗೆ ಒಂದು ನಿಯಮನ ಎಂದು ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ನಡೆಯುತ್ತಿಲ್ಲ ಪ್ರೋಟೋಕಾಲ್

ಈ ಹಿಂದೆ ಜನಪ್ರತಿನಿಧಿಗಳ ಊರು ತುಂಬ ಬ್ಯಾನರ್ ಹಾಕುವುದು ಸಾಮಾನ್ಯವಾಗಿದೆ. ಅಧಿಕಾರಿಗಳು ಬ್ಯಾನರ್ ಹಾಕಿಸಿದರೆ ಅದು ಭಾರಿ ವಿಶೇಷ. ಅದು ಕೂಡ ಸಂಘಸAಸ್ಥೆಗಳಿAದ ಅಥವ ವಯಕ್ತಿಕ ಹಾಕಿದರೆ ಪರವಾಗಿಲ್ಲ. ಆದರೆ, ನಗರಸಭೆಯಿಂದ ಸೋಮವಾರ ಪೌರಾಕಾರ್ಮಿಕ ದಿನಾಚರಣೆ ನಡೆಸಲಾಗುತ್ತಿದೆ ಎಂದು ಸದಸ್ಯರ ಮಾತಾಗಿದೆ. ಆದರೆ ಬ್ಯಾನರ್‌ಗಳಲ್ಲಿ ಎಂಪಿ, ಶಾಸಕ, ಹಾಗೂ ಸ್ಥಳೀಯ ಆಡಳಿತದ ಅಧ್ಯಕ್ಷ, ಉಪಾಧ್ಯಕ್ಷರ ಪೋಟೋಗಳಿಲ್ಲದೇ ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮ ಆಗಿದ್ದರೆ ಪ್ರೋಟೋಕಾಲ್ ಯಾಕೆ ಪಾಲನೆ ಆಗುತ್ತಿಲ್ಲ ಎಂದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರೋಟೋಕಾಲ್ ಅಗತ್ಯ. ಕರ್ನಾಟಕ ಸರ್ಕಾರ ಎಂದು ಹಾಕಿಕೊಂಡು ಬ್ಯಾನರ್ ಅಳವಡಿಸ ಬಾರದು. ನಿಷೇಧಿತ ಬ್ಯಾನರ್ ಹಾಕಬಾರದು. ಪರಿಶೀಲಿಸಿ ಕ್ರಮ ಕೈಗೊಳ್ಳುವೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ
ನಗರಸಭೆಯಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರಂತೆ. ನಮ್ಮ ಪೌರಾಕಾರ್ಮಿಕಗಾಗಿ ಆಚರಣೆ ಆಗುವ ದಿನ ಯಶಸ್ವಿಯಾಗಲಿ. - ರೂಪೇಶ್ ಕುಮಾರ್, ನಗರಸಭೆ ಅಧ್ಯಕ್ಷ, ಹೊಸಪೇಟೆ
ನಗರದಲ್ಲಿ ನಿಷೇಧಿತ ಬ್ಯಾನರ್ ಅಳವಡಿಸಿದ್ದು ಮಾಹಿತಿ ಇಲ್ಲ. ಪ್ರೋಟೋಕಾಲ್ ಇಲ್ಲದೇ ಕಾರ್ಯಕ್ರಮ ಮಾಡಲ್ಲ. ಪರಿಶೀಲಿಸಿ ಕ್ರಮಕೈಗೊಳ್ಳುವೆ. ಸಿ.ಚಂದ್ರಪ್ಪ, ನಗರಸಭೆ ಪೌರಾಯುಕ್ತ, ಹೊಸಪೇಟೆ