ನ್ಯೂಸ್

ಇಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಚುನಾವಣೆ / ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೇಸ್ ರೇಸ್‌ನಲ್ಲಿ ಮೂವರು ಲಾಬಿ / ೧೧ ಗಂಟೆಗೆ ನಾಮಪತ್ರಗಳ ಸಲ್ಲಿಕೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಚುನಾವಣೆ ಇಂದು ನಡೆಯಲಿದೆ. ಕೋಚಿಮುಲ್ ವಿಭಜನೆಯಾದ ನಂತರ ಪ್ರಥಮ ಬಾರಿಗೆ ಕೋಮುಲ್ ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ.

ಜೂ.೨೫ ರಂದು ೧೩ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು, ಬೆಳ್ಳಿಗ್ಗೆ ೧೧ ಗಂಟೆಗೆ ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಲಿವೆ. ಮಧ್ಯಾಹ್ನ ೧ ಗಂಟೆಗೆ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆದು ಅಧ್ಯಕ್ಷರ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾದರೆ ಫಲಿತಾಂಶ ಘೋಷಣೆಯಾಗಲಿದೆ. ನಾಮಪತ್ರಗಳು ಒಂದಕ್ಕಿAತ ಹೆಚ್ಚು ಸಲ್ಲಿಕೆಯಾದರೆ ನಾಮಪತ್ರಗಳನ್ನು ಪರಿಶೀಲನೆ ನಡೆಸಿ ಚುನಾವಣೆ ನಡೆಯಲಿದೆ.

ಕೋಮುಲ್‌ನ ೧೩ ನಿದೇಶಕರನ್ನು ಕಾಂಗ್ರೇಸ್ ಬೆಂಬಲದಿAದ ೯ ನಿರ್ದೇಶಕರು ಆಯ್ಕೆ ಆಗಿದ್ದು, ಎನ್.ಡಿ.ಎ ನಿಂದ ೪ ನಿರ್ದೇಶಕರು ಆಯ್ಕೆ ಆಗಿದ್ದಾರೆ.

ಕಾಂಗ್ರೇಸ್‌ನಿAದ ಆಯ್ಕೆ ಆಗಿರುವ ೯ ಜನ ನಿರ್ದೇಶಕರಲ್ಲಿ ಘಟಬಂಧನ್ ಗುಂಪಿನಿAದ ೭ ಜನ, ಘಟಬಂಧನ್ ವಿರೋಧಿ ಗುಂಪಿನಿAದ ಇಬ್ಬರು ಆಯ್ಕೆಗೊಂಡಿದ್ದಾರೆ. ೩ನೇ ಬಾರಿಗೆ ಘಟಬಂಧನ್ ಗುಂಪಿನಿAದ ಕೆ.ವೈ.ನಂಜೇಗೌಡ ಮರು ಆಯ್ಕೆ ಬಯಸಿದ್ದಿದಾರೆ. ಘಟಬಂಧನ್ ವಿರೋಧಿ ಗುಂಪಿನಿAದ ಆಯ್ಕೆ ಆಗಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ಮಹಾಲಕ್ಷಿö್ಮÃ ಪ್ರಸಾದ್‌ಬಾಬು ಇವರೂ ಸಹ ಅಧ್ಯಕ್ಷರ ಸ್ಥಾನಕ್ಕಾಗಿ ಲಾಬಿ ಮುಂದುವರೆದಿದ್ದು, ಗುರುವಾರ ೨ ಗುಂಪುಗಳನ್ನು ಹೈಕಮ್ಯಾಂಡ್ ಭೇಟಿ ಮಾಡಿ ಒತ್ತಡ ತಂದಿದ್ದಾರೆ.

ಘಟಬಂಧನ್ ವಿರೋಧಿ ಗುಂಪಿನಲ್ಲಿ ಗುರ್ತಿಸಿಕೊಂಡಿರುವ ಎಸ್.ಎನ್.ನಾರಾಯಣಸ್ವಾಮಿ ಮತ್ತು ಮಹಾಲಕ್ಷಿö್ಮÃ ಪ್ರಸಾದ್‌ಬಾಬು ಅಭ್ಯರ್ಥಿಗಳಾದರೆ ಎನ್.ಡಿ.ಎ ಬೆಂಬಲದಿAದ ಆಯ್ಕೆ ಆಗಿರುವ ೪ ಜನ ನಿರ್ದೇಶಕರ ಬೆಂಬಲವೂ ಸಿಗಲಿದೆ ಎಂದು ಹೈಕಮ್ಯಾಂಡ್ ಬಳಿ ಅಧ್ಯಕ್ಷರ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ.

ಕಾಂಗ್ರೇಸ್‌ಗೆ ಎನ್.ಡಿ.ಎ ಬೆಂಬಲ ಅವಶ್ಯಕತೆಯೇ? :

ರಾಜ್ಯದಲ್ಲಿ ಕಾಂಗ್ರೇಸ್‌ಗೆ ಎನ್.ಡಿ.ಎ. ವಿರೋಧವಾಗಿರುವಾಗ ಎನ್.ಡಿ.ಎ. ಬೆಂಬಲ ಅವಶ್ಯಕತೆ ನಮಗೆ ಬೇಕೆ. ಘಟಬಂಧನ್ ಗುಂಪಿನಲ್ಲಿ ೭ ಜನ ನಿರ್ದೇಶಕರ ಜೊತೆಗೆ ಸರ್ಕಾರಿ ನಾಮಕರಣ ಸದಸ್ಯ ಸೇರಿ ಸಂಖ್ಯೆ ೮ ಇರುವಾಗ ನಮ್ಮದೇ ಮೇಲುಗೈ ಆಗಿರುವಾಗ ನಮಗೆ ಅವಕಾಶಗಳು ಬೇಕಾಗಿದೆ ಎಂದು ಘಟಬಂಧನ್ ಪ್ರತಿಪಾದಿಸುತ್ತಿದ್ದು, ಇದನ್ನೇ ಮುಂದಿಟ್ಟುಕೊAಡು ಹೈಕಮ್ಯಾಂಡ್ ಬಳಿ ಸರ್ಕಾರಿ ನಾಮಕರಣ ಸದಸ್ಯ ಸೇರಿ ಕೆ.ಎಂ.ಎಫ್.ನಿAದ ೧, ಸಹಕಾರ ಇಲಾಖೆಯಿಂದ ೧, ಪಶುಪಾಲನೆ ಮತ್ತು ಪಶುಸಂಗೋಪನೆ ಇಲಾಖೆಯಿಂದ ೧ ಸೇರಿ ೩ ನಾಮ ನಿರ್ದೇಶಕರ ಬೆಂಬಲ ನಮಗೆ ಕೊಡಬೇಕೆಂದು ಈಗಾಗಲೇ ಘಟಬಂಧನ್ ಗುಂಪಿನವರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಹಕಾರ ಸಚಿವರ ಬಳಿ ಒತ್ತಡ ತಂದು ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಎಸ್.ಎನ್.ಗೆ ಕೆ.ಎಂ.ಎಫ್. ಡೆಲಿಗೇಟ್ :

ಕಾಂಗ್ರೇಸ್‌ನಲ್ಲಿನ ಭಿನ್ನಮತವನ್ನು ಸರಿದೂಗಿಸಲು ಹೈಕಮ್ಯಾಂಡ್ ನಂಜೇಗೌಡರಿಗೆ ಕೋಮುಲ್ ಅಧ್ಯಕ್ಷರ ಸ್ಥಾನ, ಎಸ್.ಎನ್.ಗೆ ಕೆ.ಎಂ.ಎಫ್‌ಗೆ ಹೋಗಲು ಡೆಲಿಗೇಟ್ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಕೆ.ಎಂ.ಎಫ್. ಚುನಾವಣೆಗೆ ಇನ್ನು ೩ ತಿಂಗಳು ಕಾಲಾವಕಾಶ ಇರುವುದರಿಂದ ಕೆ.ಎಂ.ಎಫ್. ಚುನಾವಣೆ ಸಂದರ್ಭದಲ್ಲಿ ನೋಡೋಣ ಎಂಬ ಭರವಸೆಯನ್ನು ಎಸ್.ಎನ್.ಗೆ ನೀಡಿದ್ದಾರೆ ಎನ್ನಲಾಗಿದೆ.

ಕೆ.ಎಂ.ಎಫ್. ಮೇಲೆಯೂ ಕಣ್ಣಿಟ್ಟಿರುವ ನಂಜೇಗೌಡ :

ಕಳೆದ ಬಾರಿ ನಡೆದ ಕೆ.ಎಂ.ಎಫ್. ಚುನಾವಣೆ ಸಂದರ್ಭದಲ್ಲಿ ಕೆ.ಎಂ.ಎಫ್.ಅಧ್ಯಕ್ಷನಾಗಲು ನಂಜೇಗೌಡ ತೀವ್ರವಾಗಿ ಲಾಬಿ ನಡೆಸಿದ್ದು, ಆಗ ಅಧ್ಯಕ್ಷರ ಸ್ಥಾನ ಭೀಮಾನಾಯಕ್‌ಗೆ ನೀಡಿ ಮುಂದಿನ ಬಾರಿ ನೋಡೋಣ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಈಗಾಗಲೇ ಕೋಮುಲ್‌ನಲ್ಲಿ ಕಾಮಗಾರಿಗಳು ಬಾಕಿ ಇರುವುದರಿಂದ ಕೋಮುಲ್ ಅಧ್ಯಕ್ಷರ ಸ್ಥಾನ ನೀಡಿ ನಂತರ ಕೆ.ಎಂ.ಎಫ್. ಅಧ್ಯಕ್ಷರ ಸ್ಥಾನ ಕೊಟ್ಟರೆ ಕೋಮುಲ್ ಕುರ್ಚಿ ಬಿಟ್ಟುಕೊಡುತ್ತೇನೆ ಎಂದು ನಂಜೇಗೌಡ ಎರಡ ಮೇಲೆಯೂ ಕಣ್ಣಿಟ್ಟಿದ್ದಾರೆ.

ಇಬ್ಬರಲ್ಲಿ ಯಾರಿಗೆ ಕೋಮುಲ್ ಅಧ್ಯಕ್ಷರ ಸ್ಥಾನ ? :

ಕಾಂಗ್ರೇಸ್‌ನಲ್ಲಿ ಕೋಮುಲ್ ಅಧ್ಯಕ್ಷರ ಸ್ಥಾನಕ್ಕೆ ಇಬ್ಬರು ಶಾಸಕರು ತೀವ್ರ ಲಾಬಿ ನಡೆಸುತ್ತಿದ್ದು, ಇವರ ಮಧ್ಯೆ ಮಹಿಳಾ ಮೀಸಲು ಕ್ಷೇತ್ರದ ಮಹಾಲಕ್ಷಿö್ಮÃ ಪ್ರಸಾದ್‌ಬಾಬು ಸಹ ತೀವ್ರ ಲಾಬಿ ನಡೆಸಿದ್ದಾರೆ. ಶಾಸಕರು ಇಬ್ಬರಲ್ಲಿ ಯಾರಿಗೆ ಕೋಮುಲ್ ಅಧ್ಯಕ್ಷರ ಸ್ಥಾನ ಒಲಿಯುತ್ತದೆಯೋ ಕಾದು ನೋಡಬೇಕಾಗಿದೆ. ಕಾಂಗ್ರೇಸ್‌ನಲ್ಲಿ ಗೆಲುವು ಸಾಧಿಸಿರುವ ೯ ಜನ ನಿರ್ದೇಶಕರಲ್ಲಿ ನಂಜೇಗೌಡರು ೭ ನಿರ್ದೇಶಕರು ಹಾಗೂ ಒಬ್ಬ ನಾಮಕರಣ ಸದಸ್ಯ ಸೇರಿ ೮ ಜನರ ಬೆಂಬಲವಿರುವುದರಿAದ ಸರ್ಕಾರದ ನಾಮ ನಿರ್ದೇಶಕರ ೩ ಜನ ಬೆಂಬಲವೂ ಹೆಚ್ಚು ನಿರ್ದೇಶರಕ ಬೆಂಬಲ ಇರುವ ಅಭ್ಯರ್ಥಿ ನೀಡುವ ಸಾಧ್ಯತೆ ಇರುವುದರಿಂದ ನಂಜೇಗೌಡರು ಕೋಮುಲ್ ಅಧ್ಯಕ್ಷರಾಗುವುದು ಖಚಿತಗೊಂಡAತೆ ಆಗಿದೆ.

ಬಾಕ್ಸ್

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೇಸ್‌ನ ೪ ಶಾಸಕರು ಮತ್ತು ಇಬ್ಬರು ಎಂ.ಎಲ್.ಸಿ.ಗಳು ಇದ್ದು, ಕೆ.ಜಿ.ಎಫ್. ಶಾಸಕಿ ರೂಪಕಲಾ ಮತ್ತು ಎಸ್.ಎನ್.ನಾರಾಯಣಸ್ವಾಮಿ ರವರಿಗೆ ಕ್ಯಾಬಿನೇಟ್ ದರ್ಜೆಯ ನಿಗಮ ಸ್ಥಾನದ ಅವಕಾಶ ಕಲ್ಪಿಸಿಕೊಡಲಾಗಿದೆ. ಎಂ.ಎಲ್.ಸಿ.ನಸೀರ್ ಅಹ್ಮದ್ ರವರಿಗೆ ಸಚಿವ ಸ್ಥಾನಮಾನದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನ ಕಲ್ಪಿಸಿಕೊಡಲಾಗಿದೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮತ್ತು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂ.ಎಲ್.ಸಿ.ಅನಿಲ್‌ಕುಮಾರ್ ರವರಿಗೆ ಯಾವುದೇ ಸ್ಥಾನಮಾನ ನೀಡದೇ ಇರುವುದರಿಂದ ನಂಜೇಗೌಡರಿಗೆ ಕೋಮುಲ್ ಅಧ್ಯಕ್ಷರ ಸ್ಥಾನ ಕಲ್ಪಿಸಿಕೊಡಲು ಹೈಕಮ್ಯಾಂಡ್ ಮುಂದಾಗಿದೆ.

ಚಿತ್ರ ೦೪ ಕೆ.ಎಲ್.ಆರ್. ೦೨ : ಕೋಮುಲ್ ಕಛೇರಿ ಚಿತ್ರ

ಚಿತ್ರ ೦೪ ಕೆ.ಎಲ್.ಆರ್. ೦೨ : ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭಾವಚಿತ್ರ

ಚಿತ್ರ ೦೪ ಕೆ.ಎಲ್.ಆರ್. ೦೨ : ಶಾಸಕ ಕೆ.ವೈ.ನಂಜೇಗೌಡ ಭಾವಚಿತ್ರ