ನ್ಯೂಸ್

ಇಂದಿರಾ ಕ್ಯಾಂಟೀನ್ ನೌಕರರ ಪ್ರತಿಭಟನೆ

ಇಂದಿರಾ ಕ್ಯಾಂಟೀನ್ ನೌಕರರನ್ನು ಕಾಯಂಗೊಳಿಸಬೇಕು, ಸಂಬಳ ನೀಡದೆ ಇರುವ ಕಂಪನಿಯನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ನಗರಪಾಲಿಕೆ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಬಡವರಿಗೆ ಅನ್ನ ನೀಡುತ್ತಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸುಮಾರು 6 ವರ್ಷಗಳಿಂದ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವವರು ಕಡು ಬಡವರಾಗಿದ್ದಾರೆ. ಈ ಹಿಂದೆ ಗುತ್ತಿಗೆ ಪಡೆದ ಸಂಸ್ಥೆ ಸಂಬಳವನ್ನು ತಡವಾದರೂ ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು. ಆದರೆ, ಈಗಿನ ಟೆಂಡರ್ ಗುತ್ತಿಗೆದಾರ ಸುಮಾರು 8 ತಿಂಗಳಿನಿಂದ ವೇತನ ನೀಡಿಲ್ಲ. ಈ ಕುರಿತು ಆರೋಗ್ಯಾಧಿಕಾರಿ, ಆಯುಕ್ತರು, ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಷ್ಟೇ ಮನವಿ ಮಾಡಿದರೂ ಸುಮಾರು 4 ತಿಂಗಳಿನಿಂದ ಸರಿಯಾಗಿ ವೇತನ ನೀಡದ ಕಾರಣ ನೌಕರರು ಕುಟುಂಬ ನಿರ್ವಹಣೆ ಮಾಡುವುದು ತುಂಬ ಕಷ್ಟವಾಗಿದೆ. ಮನೆಯಲ್ಲಿ ಹೆಂಡತಿ ಮಕ್ಕಳು ಊಟಕ್ಕೂ ತೊಂದರೆ ಪಡುತ್ತಿದ್ದಾರೆ ಎಂದು ದೂರಿದರು.