ನ್ಯೂಸ್

ಇಂದಿನಿಂದ 2 ದಿನಗಳ ಕಾಲ ಸಂಸ್ಕಾರ ಭಾರತೀ ಸಭೆ

ಚಿತ್ರದುರ್ಗ: ಸಂಸ್ಕಾರ ಭಾರತೀ ಚಿತ್ರದುರ್ಗ ಶಾಖೆ ದಶಮಾನೋತ್ಸವದ ಅಂಗವಾಗಿ ಆ.26ರಿಂದ 2 ದಿನಗಳ ಕಾಲ ನಗರದಲ್ಲಿ ರಾಜ್ಯ ಮಟ್ಟದ ಪ್ರಾಂತ ಪ್ರಬಂಧಕಾರಿಣಿ ಬೈಠಕ್ ಮತ್ತು ಪ್ರಾಂತ ಸರ್ವ ಸಾಧಾರಣ ಸಭೆ ನಡೆಯಲಿದೆ.
26ರಂದು ಶನಿವಾರ ಜೋಗಿಮಟ್ಟಿ ರಸ್ತೆ ಶ್ರೀ ಸದ್ಗುರು ಕಬೀರಾ ಸೇವಾಶ್ರಮದಲ್ಲಿ ಮಧ್ಯಾಹ್ನ 2.30ರಿಂದ ಸಂಜೆ 6.30ರವರೆಗೆ ಪ್ರಾಂ ತ ಪ್ರಬಂಧಕಾರಿಣಿ ಸಭೆ ನಡೆಯಲಿದ್ದು,ಸಂಜೆ 6ಕ್ಕೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಂಸ್ಕಾರ ಭಾರತೀಯ ಪ್ರಾಂತದ ಅಧ್ಯಕ್ಷ,ನಟ ಸು ಚೇಂದ್ರಪ್ರಸಾದ್ ಹಾಗೂ ರಾಜ್ಯಪದಾಧಿಕಾರಿಗಳ ಪರಿಚಯ ಕಾರ‌್ಯಕ್ರಮ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಅಷ್ಠವಿಧಾ ಕಲಾ ಸಂಭ್ರ ಮ ಮತ್ತು ಕಲಾ ಪ್ರಸ್ತುತ್ತಿಗಳು ಪ್ರದರ್ಶನವಾಗಲಿದೆ. 27ರಂದು ಬೆಳಗ್ಗೆ 10ರಿಂದ 6.30ರವರೆಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಪ್ರಾಂ ತ ಸರ್ವ ಸಾಧಾರಣಾ ಸಭೆ ನಡೆಯಲಿದೆ. ಅಖಿಲ ಭಾರತೀಯ ಸಂಘಟನಾ ಕಾರ‌್ಯದರ್ಶಿ ಅಭಿಜಿತ್‌ಗೋಖಲೆ ಅವರು ಭಾಗವಹಿಸಲಿದ್ದಾ ರೆ ಎಂದು ಸಂಸ್ಥೆ ಜಿಲ್ಲಾಧ್ಯಕ್ಷೆ ಸುಜಾತಲಿಂಗಾರೆಡ್ಡಿ ಮತ್ತು ಕಾರ‌್ಯದರ್ಶಿ ಉಮೇಶ್ ತುಪ್ಪದ್ ಅವರು ತಿಳಿಸಿದ್ದಾರೆ.