ನ್ಯೂಸ್

ಇಂದಿನ ರಾಜಕಾರಣಿಗಳಿಗೆ ಅರಸು ಮಾದರಿ

  • ಹುಣಸೂರು: ಭೂ ಸುಧಾರಣೆಯಂತಹ ಕ್ರಾಂತಿಕಾರಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
    ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜಯಂತಿಯ ಅಂಗವಾಗಿ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆಯಡಿ ತಮ್ಮ ಮನೆಯಲ್ಲಿ ಕೂಲಿಕಾರನಾಗಿ ದುಡಿಯುತ್ತಿದ್ದ ಚಲುವಯ್ಯ ಕುಟುಂಬಕ್ಕೆ ತಮ್ಮ 5.35 ಎಕರೆ ಭೂಮಿಯನ್ನು ನೀಡುವ ಮೂಲಕ ಕಾಯ್ದೆ ಜಾರಿಗೆ ಚಾಲನೆ ನೀಡಿದ್ದರು. ಆ ಮೂಲಕ ತಮ್ಮ ಮನೆಯಿಂದಲೇ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಆದರ್ಶಪ್ರಾಯರಾದರು. ಅವರ ಸಾಮಾಜಿಕ ಕಾಳಜಿ, ಅಭಿವೃದ್ಧಿ ಪರ ಚಿಂತನೆಗಳು ಇಂದಿನ ಅಧಿಕಾರಶಾಹಿಗಳಿಗೆ ಮಾದರಿಯಾಗಿದೆ ಎಂದರು.