ನ್ಯೂಸ್

ಇ-ಕೆವೈಸಿ ಕಾರ್ಯಕ್ರಮ ಪುನರಾರಂಭ

ಬೆಂಗಳೂರು: ಪಡಿತರ ಚೀಟಿದಾರರುಗಳ ಮಾಹಿತಿಯನ್ನು ಉನ್ನತೀಕರಿಸಲು 2019ರ ಜೂನ್‌ನಿಂದ 2020ರ ಫೆಬ್ರವರಿ ವರೆಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಇ-ಕೆವೈಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೋವಿಡ್ -19 ರ ಹಿನ್ನೆಲೆಯಲ್ಲಿ ಇ-ಕೆವೈಸಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು.

ಪ್ರಸ್ತುತ ಎಎವೈ, ಪಿಹೆಚ್‍ಹೆಚ್ ಪಡಿತರ ಚೀಟಿಗಳ ಇ-ಕೆವೈಸಿ ಸಂಗ್ರಹಿಸುವ ಕಾರ್ಯವನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಮರುಪ್ರಾರಂಭಿಸಲಾಗಿದೆ ಎಂದು ಆಹಾರ ಮತ್ತು ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪಶ್ಚಿಮ‌ ವಲಯದ ಉಪ‌ನಿರ್ದೇಶಕರು ತಿಳಿಸಿದ್ದಾರೆ.