ನ್ಯೂಸ್

ಆ್​ಲೈನ್​ನಲ್ಲಿ ಪಿಜಿಸಿಇಟಿ ದಾಖಲಾತಿ ಪರಿಶೀಲನೆ


ಬೆಂಗಳೂರು
ಕರ್ನಾಟಕ ಪರೀಾ ಪ್ರಾಧಿಕಾರ(ಕೆಇಎ) ಸಿಇಟಿ ದಾಖಲಾತಿ ಪರಿಶೀಲನೆಯನ್ನು ಆನ್​ಲೈನ್​ ನಡೆಸಿ ಇದೀಗ ಪಿಜಿಸಿಇಟಿ ದಾಖಲಾತಿ ಪರಿಶೀಲನೆಯನ್ನು ಆ್​ಲೈನ್​ ಮೂಲಕ ನಡೆಸಲು ನಿರ್ಧರಿಸಿದೆ.
ಸಿಇಟಿ ಅಭ್ಯರ್ಥಿಗಳಿಗಿಂತ ಪಿಜಿಸಿಇಟಿ ಅಭ್ಯರ್ಥಿಗಳ ಪ್ರಮಾಣ ಪತ್ರ, ಅಂಕಪಟ್ಟಿಗಳು ಹೆಚ್ಚಿಗೆ ಇರುವುದರಿಂದ ಆನ್​ಲೈನ್​ನಲ್ಲಿ ಇವೆಲ್ಲಾ ಅಂಕಪಟ್ಟಿಗಳನ್ನು ಅಪ್​ಲೋಡ್​ ಮಾಡುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಆ್​ಲೈನ್​ನಲ್ಲೇ ನಡೆಸಲು ಕೆಇಎ ನಿರ್ಧರಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಆ ಪ್ರಕಾರವಾಗಿ ಡಿ.13ರಿಂದ 17ರವರೆಗೆ 10 ಸಹಾಯವಾಣಿ ಕೇಂದ್ರಗಳಲ್ಲಿ ದಾಖಲಾತಿ ಪರಿಶೀಲನೆ ನಡೆಯಲಿದೆ. ಡಿ.16ರಂದು ಅಂಗವಿಕಲ ವಿದ್ಯಾರ್ಥಿಗಳಿಗೆ ಬೆ.11.30ಕ್ಕೆ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಯಲ್ಲಿ ವೈದ್ಯಕಿಯ ಮತ್ತು ಪ್ರಮಾಣ ಪತ್ರಗಳ ಪರಿಶೀಲನೆ ನಡೆಯಲಿದೆ.
2020ನೇ ಸಾಲಿನ ಎಂ.ಇ, ಎಂ.ಟೆಕ್​, ಎಂ.ಆರ್ಕ್​, ಎಂ.ಸಿ.ಎ ಕೋರ್ಸ್​ಗಳ ಪ್ರವೇಶಾತಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ ದಾಖಲಾತಿ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಸಿಇಟಿ ಅಭ್ಯರ್ಥಿಗಳ ಪ್ರಮಾಣ ಪತ್ರಗಳು ಕಡಿಮೆ ಇರಲಿದ್ದು, ಪಿಜಿಸಿಇಟಿ ಅಭ್ಯರ್ಥಿಗಳ ಪ್ರಮಾಣ ಪತ್ರಗಳು 30ಕ್ಕೂ ಹೆಚ್ಚು ಇರುವುದರಿಂದ ಪ್ರತಿಯೊಂದನ್ನು ಸ್ಕಾ$ನ್​ ಮಾಡಿ ಅಪ್​ಲೋಡ್​ ಮಾಡುವುದು ಅಭ್ಯರ್ಥಿಗಳಿಗೆ ಕಿರಿ&ಕಿರಿ ಉಂಟುಮಾಡುವುದರಿಂದ ಆ್​ಲೈನ್​ಗೆ ಮುಂದಾಗಿದ್ದೇವೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು, ಬಳ್ಳಾರಿ, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಮಂಗಳೂರು, ವಿಜಯಪುರ, ಧಾರವಾಡ, ದಾವಣಗೆರೆ ಕೇಂದ್ರಗಳಲ್ಲಿ ರ್ಯಾಂಕ್​ ಆಧಾರದ ಮೇಲೆ ದಾಖಲಾತಿ ಪರಿಶೀಲನೆ ನಡೆಯಲಿದೆ. ಎಲ್ಲ ಮೂಲ ದಾಖಲೆಗಳನ್ನು ಮತ್ತು ಗೆಜೆಟೆಡ್​ ಅಧಿಕಾರಿಯಿಂದ ದೃಢೀಕರಿಸಿರುವ ಪ್ರತಿಯನ್ನು ತರುವುದು ಕಡ್ಡಾಯವಾಗಿದೆ. ದಾಖಲಾತಿ ಪರಿಶೀಲನೆಗೆ ವಿದ್ಯಾರ್ಥಿಗಳೇ ನೇರವಾಗಿ ಹಾಜರಾಗಬೇಕು. ಅವರ ಪರವಾಗಿ ಬೇರೆ ಅವರು ಹಾಜರಾಗಲು ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಕೆಇಎ ವೆಬ್​ಸೈಟ್​ ಜಠಿಠಿಟ://ಛಿಚ.ಚ್ಟ.್ಞಜ್ಚಿ.ಜ್ಞಿ/ನೋಡಬಹುದು.