ನ್ಯೂಸ್

ಆಹಾರ ಗುಣಮಟ್ಟದ ಖಾತ್ರಿಗಾಗಿ ತಪಾಸಣೆ ನಡೆಸಿ,ಡಿಸಿ

ಚಿತ್ರದುರ್ಗ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಅಂಗನವಾಡಿ,ಶಾಲೆ,ಹಾಸ್ಟೆಲ್ಗಳು ಆಹಾ ರ ಸುರಕ್ಷತೆ ನೋಂದಣಿ ಕಡ್ಡಾಯವಾ ಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾ ತನಾಡಿದ ಅವರು, ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಗುಣಮಟ್ಟದ ಖಾತ್ರಿ ಕುರಿತಂತೆ ನಿಯಮಿತ ತಪಾಸಣೆ ನಡೆಸಬೇಕು. ಆ ಹಾರ ಸೇವಿಸುವ ಮಕ್ಕಳ ಸುರಕ್ಷತೆ ಮುಖ್ಯ.
ಬಿಸಿ ಊಟ ನೀಡುವ ಶಾಲೆಗಳು,ವಿವಿಧ ಇಲಾಖೆ ಹಾಸ್ಟೆಲ್ಗಳು,ಅಂಗನವಾಡಿಗಳು ತಪ್ಪದೇ ನೋಂದಣಿ ಮಾಡಿಕೊಳ್ಳಬೇಕು. ಬಾಣ ಸಿಗರು ಹಾಗೂ ಬಡಿಸುವರ ವೈದ್ಯಕೀಯ ಪ್ರಮಾಣ ಪತ್ರ ಪಡೆಯಬೇಕು. ನೀರಿನ ಪರೀಕ್ಷೆ ಮಾಡಿಸಬೇಕು. ಆಹಾರ ಪದಾರ್ಥಗಳ ಗುಣ ಮಟ್ಟದ ಜತೆಗೆ ಸ್ಪಚ್ಛತೆಗೂ ಆದ್ಯತೆ ನೀಡಬೇಕು. ಆಹಾರ ಸುರಕ್ಷತೆ ಪ್ರಮಾಣ ಪತ್ರ ಪಡೆಯುವುದರಿಂದ ಅಡುಗೆ ತಯಾರಕರು ಮಾನಸಿಕ ವಾಗಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪಾಲಾಕ್ಷ ಮಾತನಾಡಿ, ಜಿಲ್ಲೆಯಲ್ಲಿ 450 ಶಾಲೆಗಳ ನೋಂದಣಿ ಆಗಿವೆ. ಇನ್ನೂ 20 00 ಶಾಲೆಗಳ ನೋಂದಣಿ ಬಾಕಿಯಿದೆ. ಶಾಲೆ,ಹಾಸ್ಟೆಲ್,ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಸುರಕ್ಷತೆ ಹಾಗೂ ಪಾಲಿಸಬೇಕಾದ ನಿಯಮಗಳ ಕುರಿತು ಕಾರ‌್ಯಾಗಾರ ಆಯೋಜಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೂ 7,061 ನೋಂದಣಿಯಾಗಿವೆ. ಹೊಸದಾಗಿ ಸಲ್ಲಿಕೆಯಾಗಿರುವ 2,363 ಅರ್ಜಿಗಳಲ್ಲಿ 1,030ನ್ನು ನೋಂದಾ ಯಿಸಲಾಗಿದೆ. 1,333 ಪ್ರಗತಿಯಲ್ಲಿವೆ. ಏಪ್ರಿಲ್ 2023ರಿಂದ ಜನವರಿ 2024ವರೆಗೆ ಜಿಲ್ಲಾದ್ಯಂತ 5,776 ಸ್ಥಳ ತಪಾಸಣೆ ಹಾಗೂ 989 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಆಹಾರ ಸುರಕ್ಷತೆ ಕಾಪಾಡಿಕೊಳ್ಳದ ಹಿನ್ನಲೆಯಲ್ಲಿ 500 ನೋಟಿಸ್ ನೀಡಲಾಗಿದೆ. 145 ಆಹಾರ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ಗೆ ಒಳಪಡಿಸಲಾಗಿದೆ. 3 ಮಾದರಿಗಳು ಕಲುಷಿತವಾಗಿರುವ ವರದಿ ಬಂದಿದ್ದು,ಈ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
ಕಾಯ್ದೆ ಉಲ್ಲಂಘನೆಯ 27 ಪ್ರಕರಣ ದಾಖಲಿಸಿ 44 ಸಾವಿರ ರೂ.ದಂಡ ವಸೂಲಿ ಮಾಡಲಾಗಿದೆ. ಪ್ರಸಕ್ತ ಅವಧಿ 4 ಪ್ರಕರಣಗಳು ನ್ಯಾಯಾಲಯದಲ್ಲಿವೆ. 2013ರಿಂದ 130 ಪ್ರಕರಣಗಳಲ್ಲಿ 2.61 ಲಕ್ಷ ರೂ.ದಂಡ ವಿಧಿಸಲಾಗಿದೆ. 2013ರಿಂದ 10 ಪ್ರಕರಣಗಳ ಪೈಕಿ 6 ವಿಚಾರಣೆಯಲ್ಲಿದ್ದು,04 ಇತ್ಯರ್ಥವಾಗಿವೆ. ಒಂದು ಪ್ರಕರಣದಲ್ಲಿ ಅಪರಾಧಿಗೆ ಒಂದು ತಿಂಗಳ ಜೈಲು ಶಿಕ್ಷೆಯಾಗಿದೆ ಎಂದು ಡಾ.ಪಾಲಾಕ್ಷ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತಾಡಿ,ಜಿಲ್ಲೆಯ 2,428 ಅಂಗನವಾಡಿ ಕೇಂದ್ರಗಳಲ್ಲಿ, ಎರಡು ನೋಂದಣಿಯಾಗಿವೆ. ಉಳಿದವುಗಳ ನೋಂದಣಿಗೆ ವಾರದೊಳಗೆ ಕ್ರಮ ವಹಿಸಲಾಗುವುದು.ನೋಂದಣಿ ಶುಲ್ಕ 100 ರೂ.ಗಳನ್ನು ಬಾಲವಿಕಾಸ ಸಮಿತಿಯಿಂದ ಪ್ರತಿ ಅಂಗನವಾಡಿ ಕಾರ್ಯಕರ್ತೆರಿಗೆ ಕೊಡಲಾಗುವುದು ಎಂದರು.
ಅಂಗನವಾಡಿಗಳು,ಮಹಿಳಾ ಸೇವಾ ಸಂಘಗಳು ಹಾಗೂ ಎಲ್ಲ ಹಾಸ್ಟೆಲ್ಗಳು,ನ್ಯಾಯಬೆಲೆ ಅಂಗಡಿಗಳ ನೋಂದಣಿ ಕಡ್ಡಾಯವೆಂದು ಡಿಸಿ ನಿರ್ದೇಶಿಸಿದರು. ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಆಹಾರ ಪದಾರ್ಥಗಳ ವರ್ತಕರಿಗೆ ಪರವಾನಗಿ ನೀಡುವ ಮೊದಲು ನೋಂದಣಿ ಷರತ್ತು ವಿಧಿಸಬೇಕು. ನೋಂದಾಯಿಸದ ವ್ಯಾಪಾರಿಗಳ ಪರವಾನಗಿ ರದ್ದು ಮಾಡ ಬೇಕು,ಜಾಗೃತಿ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳ ಬೇ ಕೆಂ ದು ಸೂಚಿಸಿದರು. ಹೋಟೆಲ್ ಹಾಗೂ ಬೀದಿ ಬದಿ ಆಹಾರ ಪದಾರ್ಥಗಳ ಮಾರಾಟ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಗುಣಮಟ್ಟ ಹಾಗೂ ಸ್ವಚ್ಛತೆ ತಪಾಸಣೆ ನಡೆಸ ಬೇಕೆಂದು ಡಿಸಿ ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್,ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮತ್ತಿತರ ಇಲಾಖೆ ಅಧಿಕಾರಿಗಳಿದ್ದರು.