ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ಅವರಿಗೆ ಆಶಾ ಕಾರ್ಯಕರ್ತೆಯರಾದ ಶರಾವತಿ, ನಗೀನಾ, ಪದ್ಮಾವತಿ, ಹಸೀನಾ, ಸುಶೀಲಾ ರಾಜೀನಾಮೆ ಪತ್ರ ಸಲ್ಲಿಸಿದರು. 
ನ್ಯೂಸ್

ಆಶಾ ಕಾರ್ಯಕರ್ತೆಯರ ರಾಜೀನಾಮೆ

ರಿಪ್ಪನ್‌ಪೇಟೆ: ಕಡಿಮೆ ಸಂಭಾವನೆಯಲ್ಲಿ ಹೆಚ್ಚಿನ ಕಾರ್ಯದೊತ್ತಡದಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂಬ ಕಾರಣಕ್ಕೆ ಐವರು ಆಶಾ ಕಾರ್ಯಕರ್ತರು ಸೋಮವಾರ ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ಅವರಿಗೆ ರಾಜೀನಾಮೆ ನೀಡಿದ್ದಾರೆ.

ಪಟ್ಟಣದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಶರಾವತಿ, ನಗೀನಾ, ಪದ್ಮಾವತಿ, ಹಸೀನಾ, ಸುಶೀಲಾ ರಾಜೀನಾಮೆ ನೀಡಿದ್ದಾರೆ. 16 ವಷರ್ದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಮನೆ ಸರ್ವೇ ಸಹಿತ ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಆರೈಕೆ, ಲಸಿಕೆ, ಕ ಸಂಗ್ರಹಣೆ, ಲಾರ್ವಾ ವಿರುದ್ಧ ಜನಜಾಗೃತಿ, ಮಕ್ಕಳ ಆಧಾರ್ ಕಾರ್ಡ್ ಸಂಗ್ರಹಣೆ ಜತೆಗೆ ಆಸ್ಪತ್ರೆಯ ಇನ್ನಿತರ ಕೆಲಸಗಳನ್ನು ನಿರ್ವಹಿಸಬೇಕಿದೆ. ರಾತ್ರಿಯಾದರೂ ಕೆಲಸ ಮುಗಿಯುದೇ ಇಲ್ಲ. ಬಿಡುವಿಲ್ಲದ ಕಾರ್ಯದೊತ್ತಡದಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಇಷ್ಟೆಲ್ಲ ಶ್ರಮಿಸುತ್ತಿದ್ದರೂ ಸರ್ಕಾರ ನೀಡುತ್ತಿರುವ ವೇತನ 7,000 ರೂ. ಮಾತ್ರ. ಈ ವೇತನದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಹೇಗೆ? ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಆಶಾ ಕಾರ್ಯಕರ್ತರು ರಾಜೀನಾಮೆಯಲ್ಲಿ ವಿವರಿಸಿದ್ದಾರೆ.