ನ್ಯೂಸ್

ಆಳವಾದ ಅಧ್ಯಯನ ಮೂಲಕ ನಿಂತ ನೀರಾಗಿರುವ ದಲಿತ ಚಳುವಳಿಯನ್ನು ಹರಿಯುವ ನೀರಾಗಿಸಬೇಕಾದ ಅನಿವಾರ್ಯವಿದೆ / ಎನ್.ವೆಂಕಟೇಶ್

ವಿಜಯವಾಣಿ ಸುದ್ದಿಜಾಲ ಕೋಲಾರ

ಸಾವಿರಾರು ವರ್ಷಗಳ ಶೋಷಣೆಯನ್ನು ಹೊತ್ತಿರುವ ಸಮುದಾಯಗಳನ್ನು ಮುನ್ನಡೆಸಲು ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ವಿಷಯಾಧಾರಿತ ಹೋರಾಟಗಳ ಜೊತೆಗೆ ಜಾತಿ ಆಧಾರಿತ ಜನಗಣತಿಗೆ ಜನರನ್ನು ಅಂತಿಮಗೊಳಿಸಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಎನ್.ವೆಂಕಟೇಶ್ ತಿಳಿಸಿದರು.

ನಗರದ ಟಿ.ಚೆನ್ನಯ್ಯ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಜನಪರ ಉತ್ಸವದಲ್ಲಿ ಮಂಗಳವಾರ ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯದ ಮುಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ತಲ್ಲಣಗಳು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಅಂದು ೭೦ರ ದಶಕದಲ್ಲಿ ತುಮಕೂರಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಾಗಾರ ದಸಂಸವನ್ನು ಸಾಂಸ್ಕೃತಿಕ ಚಳುವಳಿಯಾಗಿ ಮುಂದುವರೆಸಲು ಸಾಧ್ಯವಾಯಿತು. ಬೆಲ್ಚಿ ನಾಟಕವನ್ನು ಕಲಿತು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಮಾಡಿದೆವು. ಇದು ಸಂಘಟನೆಯಲ್ಲಿ ಪ್ರೀತಿ ವಿಶ್ವಾಸ ನಂಬಿಕೆಗಳನ್ನು ತುಂಬಿತು. ಇವೆಲ್ಲವೂ ಸೈದ್ಧಾಂತಿಕ ಚೌಕಟ್ಟಿನಲ್ಲಿ ಚಳುವಳಿ ಕಟ್ಟಲು ಸಾಧ್ಯವಾಯಿತು.

ದಕ್ಷಿಣ ಭಾರತದ ಶೋಷಿತ ವರ್ಗಗಳಾದ ಅಹಿಂದ ಸಮುದಾಯಗಳ ಸಾಂಸ್ಕೃತಿಕ ಹೋರಾಟಗಳ ಕಾರಣದಿಂದ ತೆಲಂಗಾಣದಲ್ಲಿ ಗದ್ದರ್ ಸಾಂಸ್ಕೃತಿಕ ಹೋರಾಟ, ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಯ ಸೈದ್ಧಾಂತಿಕ ಹೋರಾಟ ದೇಶದಲ್ಲಿ ಜಾತಿ ಆಧಾರಿತ ಜನಗಣತಿಗೆ ಕಾಂಗ್ರೆಸ್ ಪ್ರಬಲವಾಗಿ ಒತ್ತಾಯ ಮಾಡುತ್ತಿದ್ದರೂ ಸಹ ಕರ್ನಾಟಕದಲ್ಲಿ ೫೦ ವರ್ಷಗಳ ಕಾಲ ಒಂದು ರಾಜಕೀಯ ಚಳುವಳಿಯಾಗಿ ಕೆಲಸ ಮಾಡಿದ ದಲಿತ ಸಂಘರ್ಷ ಸಮಿತಿ ಇಂದು ನಿಂತ ನೀರಾಗಿದೆ ಎಂದು g ವಿಷಾದ ವ್ಯಕ್ತಪಡಿಸಿದರು.

ಭವಿಷ್ಯದ ದೃಷ್ಟಿಯಿಂದ ಶೋಷಿತ ಸಮುದಾಯಗಳು ಆಳವಾದ ಅಧ್ಯಯನ ಮೂಲಕ ನಿಂತ ನೀರಾಗಿರುವ ದಲಿತ ಚಳುವಳಿಯನ್ನು ಹರಿಯುವ ನೀರಾಗಿಸಬೇಕಾದ ಅನಿವಾರ್ಯವಿದೆ ಎಂದು ತಿಳಿಸಿದರು.

ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಮಾತನಾಡಿ, ದಲಿತ ಚಳುವಳಿಗೆ ಶಕ್ತಿ ತುಂಬಿದ್ದ ಹಾಸ್ಟೆಲ್ ಗಳಲ್ಲಿ ಹಿಂದೆ ಸೌಲಭ್ಯಗಳ ಕೊರತೆಯಿದ್ದರೂ ಜ್ಞಾನ ಕೇಂದ್ರಗಳಾಗಿದ್ದವು. ಇಂದು ಹಾಸ್ಟೆಲ್ ಗಳ ಪರಿಸ್ಥಿತಿ ಬದಲಾಗಿದೆ. ಅದರ ಫಲಾನುಭವಿಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ, ಆದರೆ, ಹಾಸ್ಟೆಲ್ ಮತ್ತು ಮೀಸಲಾತಿ ಪಡೆದವರೇ ಇಂದು ಬೀದಿಯಲ್ಲಿ ಮೀಸಲಾತಿ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಬಹುದೊಡ್ಡ ವೈರುಧ್ಯ, ಅದಕ್ಕೆ ಕಾರಣ, ಅವರಿಗೆ ಚಳುವಳಿಯ ತಾತ್ವಿಕತೆ ಅಥವಾ ರಾಜಕೀಯ ಚಳುವಳಿಯ ಪರಿಜ್ಞಾನ ವನ್ನು ಬಿತ್ತುವುದರಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಇಂದು ದಲಿತ ಚಳುವಳಿ ಸಾಕಷ್ಟು ದಣಿದಿದೆ. ಕೋಮು ಶಕ್ತಿಗಳು ದಲಿತರ ರಾಜಕೀಯ ಅಸ್ಮಿತೆಯ ಅಡಿಗಲ್ಲನ್ನು ಕೀಳುತ್ತಿರುವುದು ಗೊತ್ತೇ ಆಗಲಿಲ್ಲ. ಇದಕ್ಕೆ ಪರ್ಯಾಯ ರಾಜಕೀಯ ಕಟ್ಟುವ ಪ್ರಯತ್ನ ಸಹ ಕಾಣುತ್ತಿಲ್ಲ ಎಂದರು.

ಹೊಸ ತಲೆಮಾರಿಗೆ ಏನನ್ನೂ ದಾಟಿಸದೆ ನಾವ Åನಾವೇ ಮಾತಾಡಿ ಎದ್ದು ಹೋಗುತ್ತಿರುವುದು ಬಹಳ ದೊಡ್ಡ ದುರಂತದ ಹಿಮ್ಮುಖ ಚಲನೆ ಕಡೆಗೆ ಹೋಗುತ್ತೇವೆ, ಸಮಾಜ ಮುಖಿ ತಾತ್ವಿಕತೆ ಇಲ್ಲದ ಚಳುವಳಿ ವ್ಯರ್ಥ, ಬೌದ್ಧಿಕ ಶಕ್ತಿಯನ್ನು ತುಂಬದೆ ಚಳುವಳಿಯನ್ನು ಕಟ್ಟುವುದೇ ಒಂದು ವ್ಯಂಗ್ಯ. ಹಾಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಅದರ ಆಶಯಗಳ ಬಗ್ಗೆ ತಿಂಗಳಿಗೆ ಎರಡು ಕಾರ್ಯಾಗಾರ ನಡೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಸದಾಶಿವ ಮರ್ಜಿ, ಅಪ್ಪಗೆರೆ ಸೋಮಶೇಖರ್, ಉಪನ್ಯಾಸಕಿ ಡಾ.ನೇತ್ರಾವರ್ತಿ ಮಾತನಾಡಿದರು.

ಸಂವಾದ ಮಾಸ ಪತ್ರಿಕೆ ಸಂಪಾದಕರು ಇಂದೂಧರ ಹೊನ್ನಾಪುರ, ಡಿಎಸ್‌ಎಸ್ ಸಂಚಾಲಕ ಮಾವಳ್ಳಿ ಶಂಕರ್, ವಿಧಾನಪರಿಷತ್ ಮಾಜಿ ಸಭಪತಿ ವಿ.ಆರ್. ಸುದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಎನ್. ಅಶೋಕ್ ಚಲವಾದಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

ಚಿತ್ರ ೨೬ ಕೆ.ಎಲ್.ಆರ್. ೦೧ ನಗರದ ಟಿ.ಚೆನ್ನಯ್ಯ ರಂಗಮAದಿರದಲ್ಲಿ ನಡೆದ ಜನಪರ ಉತ್ಸವದಲ್ಲಿ ಮಂಗಳವಾರ ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯದ ಮುಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ತಲ್ಲಣಗಳು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಎನ್.ವೆಂಕಟೇಶ್, ಅಪ್ಪಗೆರೆ ಸೋಮಶೇಖರ್, ಉಪನ್ಯಾಸಕಿ ಡಾ.ನೇತ್ರಾವರ್ತಿ ಮಂತಾದವರಿದ್ದರು.