ಆಲ್ದೂರಿನಲ್ಲಿ ನಡೆದ ಗ್ರಾಮಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಎಚ್‌ಒ ಭಾನುಶ್ರೀ ಮಾಹಿತಿ ನೀಡಿದರು. ಸ್ವಪ್ನಿಲ್ ಜೋಶಿ, ಎ.ಬಿ.ಭರತ್, ಲಿಂಗೇಗೌಡ, ನವರಾಜ್, ಕೌಶಿಕ್, ಪ್ರತಿಭಾ ಇತರರಿದ್ದರು. 
ನ್ಯೂಸ್

ಆಲ್ದೂರು ಗ್ರಾಮಸಭೆಯಲ್ಲಿ ಸಮಸ್ಯೆಗಳ ಅನಾವರಣ

ಆಲ್ದೂರು: ನಿವೇಶನ, ಅಂಗನವಾಡಿ ಕಟ್ಟಡ, ಸ್ಮಶಾನ ಜಾಗದ ಸಮಸ್ಯೆ, ಬೀದಿ ನಾಯಿಗಳ ಹಾವಳಿ, ಪಾರ್ಕಿಂಗ್ ಸಮಸ್ಯೆ, ಗಾಂಜಾ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ಸಮಸ್ಯೆಗಳು ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಕೇಳಿಬಂದವು.

2025-26ರ ಮೊದಲ ಸುತ್ತಿನ ಗ್ರಾಮಸಭೆ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಾರ್ವಜನಿಕರ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಸಮರ್ಪಕ ಮಾಹಿತಿ ಇಲ್ಲದೆ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಪಂ ಸದಸ್ಯ ನವರಾಜ್ ಮಾತನಾಡಿ, ಜನವಸತಿ ಪ್ರದೇಶವನ್ನು ಡೀಮ್ಡ್ ಅರಣ್ಯಕ್ಕೆ ಸೇರಿಸುತ್ತಿದ್ದಾರೆ. ಹವ್ವಳ್ಳಿ ಗ್ರಾಮದ ಸರ್ವೇ ನಂ.303ರಲ್ಲಿ ಇಳೇಖಾನ್ ಪರಿಶಿಷ್ಟ ಜಾತಿ ಕಾಲನಿಯ ಜನ ವಸತಿ ಜಾಗವನ್ನು ಡೀಮ್ಡ್ ಅರಣ್ಯಕ್ಕೆ ಸೇರಿಸಿದ್ದು ಾರ್ಮ್- 4 ನೋಟಿಫಿಕೇಶನ್ ಜಾರಿಯಾಗಿದೆ. ಕಾರ್ಲಗದ್ದೆ ಗ್ರಾಮದ ಬಳಿ ಇರುವ ಜಾಗವನ್ನು ಕಂದಾಯ ಭೂಮಿ ಮಾಡಿ ಶ್ರೀಮಂತರಿಗೆ ಮಂಜೂರು ಮಾಡಲಾಗಿದೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಮಾಜಿ ಸದಸ್ಯ ವಸಂತ್ ಮಾತನಾಡಿ, ರೈಸ್‌ಮಿಲ್ ರಸ್ತೆಗೆ ಅಂಗನವಾಡಿ ಮಂಜೂರಾಗಿ 20 ವರ್ಷಗಳಾಗಿವೆ. ಎರಡು ಬಾರಿ ಗುದ್ದಲಿಪೂಜೆ ನಡೆದರೂ ಕಾಮಗಾರಿ ಆರಂಭವಾಗಿಲ್ಲ. ಇದಕ್ಕೆ ಹೊಣೆ ಯಾರು? ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಅವರನ್ನು ಪ್ರಶ್ನಿಸಿದರು. ಇದಕ್ಕೆ ಮಂಜುಳಾ ಪ್ರತಿಕ್ರಿಯಿಸಿ, ಈ ಹಿಂದೆ ಅಂಗನವಾಡಿಗೆ ಗುರುತು ಮಾಡಿದ ಜಾಗ ಕಟ್ಟಡ ನಿರ್ಮಾಣ ಮಾಡಲು ಯೋಗ್ಯವಿಲ್ಲವೆಂದು ವರದಿ ನೀಡಿರುವ ಪರಿಣಾಮ ವಿಳಂಬವಾಗಿದೆ ಎಂದರು. ಅಧಿಕಾರಿಗಳ ಉತ್ತರಕ್ಕೆ ಆ ಭಾಗದ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.

ಗ್ರಾಪಂ ಸದಸ್ಯೆ ಪ್ರತಿಭಾ ನವೀನ್ ಮಾತನಾಡಿ, ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಇಲಾಖೆ ಸಂಪೂರ್ಣ ವಿಲವಾಗಿದೆ. ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.

ಉಪಾಧ್ಯಕ್ಷ ಎ.ಬಿ.ಭರತ್, ಜಿಪಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಪ್ನಿಲ್ ಜೋಷಿ, ಪಿಡಿಒ ಶಂಶುನ್ ನಹರ್, ಸಿಬ್ಬಂದಿ ಪ್ರವೀಣ್, ವಾಣಿ, ನಾಗರತ್ನಾ ನಾಗೇಶ್, ಸರೋಜಮ್ಮ, ಪವಿತ್ರಾ, ಪೃಥ್ವಿ, ಸವಿತಾ, ಪ್ರದೀಪ, ನಿತಿನ್, ಬಾಬರ್ ಪಾಷಾ, ರಾಜು ಹಾಗೂ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.