ನ್ಯೂಸ್

ಆಲೂರಿನಲ್ಲಿ ನಂದಿ ಬಸವೇಶ್ವರ ಖಾಂಡ Nale

ಯಡ್ರಾಮಿ: ಆಲೂರಿನಲ್ಲಿ ಶ್ರೀ ನಂದಿ ಬಸವೇಶ್ವರ ದೇವಸ್ಥಾನದ ಖಾಂಡ ಹಾಗೂ ಕಾರ್ತಿಕ ಮಾಸ ಮುಕ್ತಾಯ ಹಾಗೂ ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ ಸೋಮವಾರ ನಡೆಯಲಿದೆ ಎಂದು ನಂದಿ ಬಸವ ಯುವ ವೇದಿಕೆಯ ಅಣವೀರಗೌಡ ಬಿರಾದಾರ ತಿಳಿಸಿದ್ದಾರೆ. ಬೆಳಗ್ಗೆ ೬ಕ್ಕೆ ನಂದಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ೬೫ ಸರ್ಕಾರಿ ನೌಕರರನ್ನು ಸನ್ಮಾನಿಸಲಾಗುವುದು. ಅಹೋರಾತ್ರಿ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನಾಶೀರ್ವಾದ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ಕೋರಿದೆ.