ಕಂಪ್ಲಿ: ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿರುವುದರಿಂದ ಮಹಿಳೆಯರ ಸ್ವಾವಲಂಬನೆ ಜೀವನ, ಆರ್ಥಿಕ ಉಳಿತಾಯಕ್ಕೆ ಅನುಕೂಲವಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್ ತಿಳಿಸಿದರು.
ರಾಜ್ಯ ಸರ್ಕಾರದ ಶಕ್ತಿ ಯೋಜನಡಿ 500 ಕೋಟಿ ಮಹಿಳೆಯರು ಪ್ರಯಾಣಿಸಿದ್ದರಿಂದ ಪಟ್ಟಣದ ಹೊಸ ಬಸ್‌ನಿಲ್ದಾಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಕುರುಗೋಡು ಡಿಪೋ ಮ್ಯಾನೇಜರ್ ಬಿ.ಚಂದ್ರಶೇಖರ್ ಮಾತನಾಡಿ, 2023ರ ಜೂ.11ರಂದು ಶಕ್ತಿ ಯೋಜನೆ ಆರಂಭಗೊಂಡು 2025ರ ಜೂ.25ರತನಕ ಕುರುಗೋಡು ಡಿಪೋ ವ್ಯಾಪ್ತಿಯಲ್ಲಿ 48,26,668 ಮಹಿಳೆಯರು, 2,02,362 ಬಾಲಕಿಯರು ಪ್ರಯಾಣಿಸಿದ್ದು, 21,93,75,390 ರೂ. ಟಿಕೆಟ್ ದರ ಆಗಿದೆ ಎಂದು ತಿಳಿಸಿದರು.
ಬಳ್ಳಾರಿಯಿಂದ ರಾತ್ರಿ 9ಗಂಟೆಗೆ ಕಂಪ್ಲಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಚಾಲಕರು, ನಿರ್ವಾಹಕರು ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ಸ್ಥಳದಲ್ಲಿದ್ದ ಮಹಿಳೆಯರು ಡಿಪೋ ಮ್ಯಾನೇಜರ ಚಂದ್ರಶೇಖರ ಅವರನ್ನು ಒತ್ತಾಯಿಸಿದರು.
ಸಂಚಾರ ನಿಯಂತ್ರಕರಾದ ಎಸ್.ರೇವಣಸಿದ್ದಪ್ಪ, ಆದಿಶೇಷ, ಪ್ರಮುಖರಾದ ಪಿ.ಮೂಕಯ್ಯಸ್ವಾಮಿ, ಬಿ.ಸಿದ್ದಪ್ಪ, ಕೆ.ಮಸ್ತಾನ್, ಲಡ್ಡು ಹೊನ್ನುರವಲಿ, ವಾಲ್ಮೀಕಿ ರಘುನಾಯಕ, ಕೆ.ಮನೋಹರ, ಗೌಡ್ರು ಅಂಜಿನಪ್ಪ, ಉಸ್ಮಾನ್, ಅಕ್ಕಿ ಜಿಲಾನ್, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಗೌಡ್ರು ಸಿದ್ದಪ್ಪ, ರೇಣುಕಮ್ಮ, ಶಿವಕುಮಾರ್, ವಿಜಯಲಕ್ಷ್ಮೀ, ರಾಜಭಕ್ಷಿ, ಶಿವರಾಜಕುಮಾರ್, ವಿ.ರಮೇಶ, ತಿಮ್ಮಪ್ಪ ಇತರರಿದ್ದರು.