ನ್ಯೂಸ್

ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ: ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಮತ

ಕೋಲಾರ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ವಾನಸಿಕವಾಗಿ ಸದೃಢರಾಗಬಹುದಾಗಿದ್ದು, ವಿದ್ಯಾರ್ಥಿಗಳು ಕ್ರೀಡೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.

ನಗರದ ಹೊರವಲಯದ ತೋಟಗಾರಿಕೆ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 12ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ವಾತನಾಡಿದರು.

ಜೀವನದಲ್ಲಿ ಗುರುವಿನ ವಾರ್ಗದರ್ಶನ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ನೀಡುವುದು ಕಲಿಯಬೇಕು. ಕ್ರೀಡೆಗಳಲ್ಲಿ ನಿಯಮ ಪಾಲಿಸುವುದರ ಜತೆಗೆ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಸೋಲು-ಗೆಲುವನ್ನು ಸವಾನವಾಗಿ ಸ್ವೀಕರಿಸಿ, ಅದೇ ರೀತಿ ಜೀವನದಲ್ಲೂ ಮುಂದುವರಿಯಬೇಕು ಎಂದರು.

ಕಠಿಣ ಶ್ರಮವಹಿಸಿ, ನಿರಂತರವಾಗಿ ಕ್ರೀಡಾಭ್ಯಾಸ ವಾಡುವುದರಿಂದ ಗುರಿ ಸಾಧಿಸಬಹುದು. ಜೀವನದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಳ್ಳುವುದರಿಂದ ಪ್ರಗತಿ ಸಾಧಿಸಬಹುದು ಎಂದರು.

ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಡಾ.ಜಿ.ಪ್ರದೀಪ್ ಕುವಾರ್ ವಾತನಾಡಿ, ಕ್ರೀಡೆಗೆ ದೈಹಿಕ ಸಾಮರ್ಥ್ಯ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲಿತದ್ದನ್ನು ರೈತರಿಗೆ ವಾಹಿತಿ ನೀಡಬೇಕು. ಸಂಶೋಧನೆಗಳನ್ನು ವಾಡಿ ಸವಾಜಕ್ಕೆ ಕೊಡುಗೆ ನೀಡಬೇಕು. ಕೋಲಾರದ ಕೆರೆಗಳು ಕಲುಷಿತವಾಗುತ್ತಿದ್ದು, ಸ್ವಚ್ಛತೆ ಕಾಪಾಡಲು ಜನರಿಗೆ ತಿಳಿವಳಿಕೆ ನೀಡುವಂತಾಗಬೇಕು ಎಂದು ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮೌಲ್ಯವಾಪನ ಕುಲಸಚಿವ ಸುಂದರ ರಾಜ್ ಅರಸ್ ವಾತನಾಡಿ, ಕ್ರೀಡೆಗಳು ಕನಸಾಗದೆ ನನಸಾಗಿರಬೇಕು. ದೈಹಿಕ ಸಾಮರ್ಥ್ಯದ ಜತೆಗೆ ವಾನಸಿಕ ಸಾಮರ್ಥ್ಯವೂ ಮುಖ್ಯವಾಗಿರುತ್ತದೆ. ದೈಹಿಕ ಶ್ರಮ ಇದ್ದರೆ ಆರೋಗ್ಯದಲ್ಲಿ ಆತಂಕ ಇರುವುದಿಲ್ಲ. ರೈತರಂತೆ ಕ್ರೀಡಾಪಟುಗಳು ಸದೃಢರಾಗಿರಬೇಕು. ಮನಸ್ಸಿನ ಭಾವನೆಗಳನ್ನು ಹೊರಹಾಕಲು ಕ್ರೀಡಾಂಗಣ ಉತ್ತಮ ಸ್ಥಳವಾಗಿದೆ. ಕ್ರೀಡೆಗಳು ಇಡೀ ವಿಶ್ವವನ್ನೇ ಒಂದುಗೂಡಿಸುವ ಕ್ರಿಯೆಯಾಗಿರುತ್ತದೆ. ಕ್ರೀಡೆಗಳಲ್ಲಿ ಅನುಭವ ಮುಖ್ಯವಾಗಿರುತ್ತದೆ. ಕ್ರೀಡೆ, ಯೋಗ, ನಡಿಗೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿವಿ ಪ್ರಭಾರ ಕುಲಪತಿ ಡಾ.ಎಂ.ಎಸ್.ಕುಲಕರ್ಣಿ, ವಿಸ್ತರಣಾ ನಿರ್ದೇಶಕ ಡಾ. ಎಸ್.ಐ.ಅಥಣಿ, ಸ್ನಾತಕೋತ್ತರ ಡೀನ್ ಡಾ.ರವೀಂದ್ರ ಮುಲಗೆ, ಹಣಕಾಸು ನಿಯಂತ್ರಣಾಧಿಕಾರಿ ಡಿ.ಎಲ್.ಸುತಗಟ್ಟಿ, ಕ್ರೀಡಾಕೂಟ ಸಂಟನಾ ಅಧ್ಯಕ್ಷ ಡಾ.ಕೆ.ರಾಮಚಂದ್ರ ನಾಯಕ್, ಕೋಲಾರ ತೋಟಗಾರಿಕೆ ವಿವಿ ಡೀನ್ ಡಾ. ಶಿವರಾಮು, ಬೀದರ್ ತೋಟಗಾರಿಕೆ ವಿವಿ ಡೀನ್ ಡಾ.ಎಸ್.ವಿ.ಪಾಟೀಲ್, ತೋಟಗಾರಿಕೆ ವಿಜ್ಞಾನಿ ಡಾ.ತುಳಸಿರಾಮ್ ಮತ್ತಿತರರು ಉಪಸ್ಥಿತರಿದ್ದರು.