???????????????????????????????????? 
ನ್ಯೂಸ್

ಆರೋಗ್ಯ ಉಚಿತ ತಪಾಸಣಾ ಶಿಬಿರ

ಕೆ.ಆರ್.ನಗರ: ಪಟ್ಟಣದ ಹೊರವಲಯದ ಮುಳ್ಳೂರು ರಸ್ತೆಯ ಕಾಳೇನಹಳ್ಳಿಯ ಅಶ್ವಿನಿ ಕ್ಲಿನಿಕ್‌ನಲ್ಲಿ ಸೋಮವಾರ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡುಗಂಭದ ಸ್ವಾಮಿ ಶಿಬಿರ ಉದ್ಘಾಟಿಸಿ ಮಾತನಾಡಿ, ಡಾ.ದೇವೇಂದ್ರಕುಮಾರ್ ದಂಪತಿ ಇಬ್ಬರೂ ವೈದ್ಯಕೀಯ ವೃತ್ತಿಯ ಆರಂಭಿಸಿದಾಗಿನಿಂದ ಇಲ್ಲಿವರೆಗೂ ಒಂದಲ್ಲ ಒಂದು ಜನಪರ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ವೈದ್ಯ ಡಾ.ಎಂ.ಕೆ.ದೇವೇಂದ್ರಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಪಟ್ಟಣ ಸೇರಿದಂತೆ ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿಯೂ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು. ನಾಗರಿಕರು ಶಿಬಿರದ ಪ್ರಯೋಜನ ಪಡೆಯಬೇಕು ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಡ್ಡರಕೊಪ್ಪಲು ಶಿವರಾಮು, ವೈದ್ಯರಾದ ಡಾ.ಜಿ.ಸಂಜಯ್, ಎ.ಆರ್.ಭಾಗ್ಯಲಕ್ಷ್ಮಮ್ಮ, ಸಂಯೋಜಕ ಲಕ್ಷ್ಮೇಶ್ ಮಾತನಾಡಿದರು. ಗ್ರಾಪಂ ಸದಸ್ಯ ಮಹಾದೇವ್, ಮುಖಂಡರಾದ ಪುಟ್ಟಸ್ವಾಮಿಗೌಡ, ಸಣ್ಣಪುಟ್ಟೇಗೌಡ, ಕೆಂಪಸ್ವಾಮಿಗೌಡ, ಹೊನ್ನೇಗೌಡ, ನಂದಿನಿ ಹಾಜರಿದ್ದರು.