ರಾಯಬಾಗ: ತಂದೆ-ತಾಯಿ ಕನಸು ನನಸಾಗಿಸುವುದು ಮಕ್ಕಳ ಜವಾಬ್ದಾರಿ ಎಂದು ಚಿಕ್ಕೋಡಿ ಕೆಎಲ್‌ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಕಿರಣಕುಮಾರ ಮುತ್ನಾಳಿ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ಜೀವನ ಹಸನಾಗಿಸಲು ನಿರಂತರ ಅಧ್ಯಯನದಲ್ಲಿ ತೊಡಗಬೇಕು. ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಆಯುರ್ವೇದ ವೈದ್ಯಕೀಯದಲ್ಲಿ ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ಆರ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ೨೦೨೪-೨೫ನೇ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಎ.ಎಂ.ಕುಲಗುಡೆ, ಡಿ.ಎಲ್.ಮಿರ್ಜೆ, ಎಂ.ಎಂ.ನಿಶಾನದಾರ, ವಿ.ಪಿ.ಪಾಟೀಲ, ಎಲ್.ಬಿ.ಪಾಟೀಲ, ಎಸ್.ಎ.ಖವಟಕೊಪ್ಪ, ಆರ್.ಎಸ್.ಬುಗಡಿಕಟ್ಟಿ, ಎಂ.ಡಿ.ಸಿಂಗಾಡಿ, ಎಸ್.ಎಸ್.ಮಂಗಾವತಿ, ವಿ.ಎ.ಮಂಡಕ್ಕಿ, ಎಂ.ಆರ್.ಹೊಸಮನಿ, ಎ.ಎ.ಶೆಟ್ಟಿ ಇತರರಿದ್ದರು. ಪಿ.ಪಿ.ಪವಾರ ನಿರೂಪಿಸಿದರು. ಎ.ಜಿ.ಹಂಜೆ ವಂದಿಸಿದರು.