ನ್ಯೂಸ್

ಆಮ್ ಆದ್ಮಿ ಪಾರ್ಟಿಯಿಂದ ಗ್ರಾಮ ಸಂಪರ್ಕ ಅಭಿಯಾನ, ಸೆಪ್ಟೆಂಬರ್ ನಲ್ಲಿ ರಾಜ್ಯಕ್ಕೆ ಕೇಜ್ರಿವಾಲ್

ವಿಜಯವಾಣಿ ಸುದ್ದಿಜಾಲ ಹಾವೇರಿ
ದೆಹಲಿ ಮತ್ತು ಪಂಜಾಬ್ ಮಾದರಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ರಾಜ್ಯದಲ್ಲಿ ತರಲು ಪಕ್ಷದಿಂದ ಗ್ರಾಮ ಸಂಪರ್ಕ ಅಭಿಯಾನ ಆಯೋಜಿಸಲಾಗುತ್ತಿದೆ ಎಂದು ಎಎಪಿ ವಲಯ ಮೇಲ್ವಿಚಾರಕ ರವಿಚಂದ್ರನ್ ಎಸ್ ನೀರಗಂಚಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೂ ಪ್ರಾಮಾಣಿಕ ಆಡಳಿತಕ್ಕೆ ಪಕ್ಷವು ಅಧಿಕಾರಕ್ಕೆ ಬರಬೇಕಿದೆ. ಭ್ರಷ್ಟ ಬಿಜೆಪಿ ಕಿತ್ತೆಸೆಯಬೇಕು. ಅಧಿಕಾರಕ್ಕೆ ಹಪಾಹಪಿಸುವ ಕಾಂಗ್ರೆಸ್ ನ್ನು ಅಧಿಕಾರದಿಂದ ದೂರವಿಡಬೇಕು. ಇದಕ್ಕಾಗಿ ಆಮ್ ಆದ್ಮಿ ಪಕ್ಷದ ಉದ್ದೇಶಗಳನ್ನು ಜನರಿಗೆ ತಲುಪಿಸಲು ಗ್ರಾಮ ಸಂಪರ್ಕ ಅಭಿಯಾನ ಎಂದರು.
ಭ್ರಷ್ಟ ಸರ್ಕಾರ, ಪಕ್ಷಗಳನ್ನು ಗುಡಿಸಿ ಎಎಪಿ ಅಧಿಕಾರಕ್ಕೆ ಬರಲಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅರವಿಂದ ಕೇಜ್ರಿವಾಲ್ ಅವರು ರಾಜ್ಯಕ್ಕೆ ಬರಲಿದ್ದಾರೆ. ಗ್ರಾಮ ಸಂಪರ್ಕ ಅಭಿಯಾನದ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಸಿಎಂ ತವರು ಜಿಲ್ಲೆಯಲ್ಲಿಯೇ ಅಭಿವೃದ್ಧಿ ಮರಿಚೀಕೆಯಾಗಿದೆ.
ತಾಲೂಕಾಧ್ಯಕ್ಷ ವಿರೇಶ ಹೊಂಬರಡಿ, ಸಂಘಟನಾ ಕಾರ್ಯದರ್ಶಿ ಲಿಂಗನಗೌಡ ಅರಳಿಹಳ್ಳಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.