ನ್ಯೂಸ್

ಆಮಿಷಕ್ಕೆ ಬಲಿಯಾಗದೆ ಮತ ಚಲಾಯಿಸಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಕರೆ

ಕೋಲಾರ: ಸ್ವಾಭಿವಾನದ ಬದುಕು ಸಾಗಿಸುವ ಹೆಣ್ಣುಮಕ್ಕಳು ಚುನಾವಣೆ ಸಂದರ್ಭದಲ್ಲಿ ಹಣ, ಆಮಿಷಕ್ಕೆ ಬಲಿಯಾಗಬಾರದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ವತಿಯಿಂದ ಸೀಶಕ್ತಿ ಗುಂಪುಗಳಿಗೆ 2 ಕೋಟಿ ರೂ. ಬಡ್ಡಿರಹಿತ ಸಾಲ ವಿತರಿಸಿ ಮತನಾಡಿದರು.

ಪ್ರಜಾಪ್ರಭುತ್ವ ಸದೃಢವಾಗಲು ಚುನಾವಣೆ ಅವಶ್ಯ. ಅದೇ ರೀತಿ ನಮ್ಮನ್ನಾಳುವ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿ ಮತ್ತು ದೇಶದ ಹಿತ ಕಾಪಾಡುವವರಾಗಿರಬೇಕು. ಇದನ್ನು ಅರಿತು ಶುದ್ಧಮನಸ್ಸಿನಿಂದ ಮತ ಚಲಾಯಿಸುವ ಮೂಲಕ ಸವಾಜ ಹಾಗೂ ದೇಶವನ್ನು ಉಳಿಸಬೇಕಾಗಿದೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಸವಾಜಸೇವೆಗೆ ಬೆಲೆ ಇಲ್ಲದಂತಾಗಿದ್ದು, ಹಣ, ಆಮಿಷಕ್ಕೆ ಬಲಿಯಾಗುವ ಪರಿಸ್ಥಿತಿ ಎದುರಾಗುತ್ತಿದೆ. ಇದು ದೇಶ ಹಾಗೂ ಸವಾಜಕ್ಕೆ ಕಂಟಕವಾದದ್ದು. ಮಹಿಳೆಯರು ಮನಸ್ಸು ವಾಡಿದರೆ ವಾತ್ರ ರಾಜಕಾರಣದ ಕೊಳಕು ಸ್ವಚ್ಛಗೊಳಿಸಬಹುದು. ಯಾವುದೇ ಸಂದರ್ಭದಲ್ಲೂ ಆಮಿಷಕ್ಕೆ ವಾರು ಹೋಗದೆ ಸ್ವಾಭಿವಾನದ ಬದುಕು ಕಟ್ಟಿಕೊಂಡು ವ್ಯಕ್ತಿತ್ವ ಉಳಿಸಿಕೊಳ್ಳಬೇಕು ಎಂದರು.

ಮಹಿಳೆಯರಿಗೆ 2 ಲಕ್ಷ ರೂ. ಸಾಲ ನೀಡುವ ಶಕ್ತಿ ಡಿಸಿಸಿ ಬ್ಯಾಂಕ್‌ಗೆ ಇದೆ. ಆದರೆ ಸಕಾಲಕ್ಕೆ ಸಾಲ ಮರುಪಾವತಿ ವಾಡಬೇಕು. ಉಳಿತಾಯದ ಹಣ ತೊಡಗಿಸುವುದು, ಎಲ್ಲ ವಹಿವಾಟನ್ನು ಬ್ಯಾಂಕ್‌ನಲ್ಲಿ ವಾಡುವ ಮೂಲಕ ಸಾಲ ನೀಡಲು ಅಲೆದಾಡಿಸಿ ಜನರ ರಕ್ತ ಹೀರುವ ಖಾಸಗಿ ಬ್ಯಾಂಕುಗಳಿಂದ ದೂರವಿರಬೇಕು ಎಂದು ಹೇಳಿದರು.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ನಿತ್ಯ 5 ಕೋಟಿ ರೂ. ವಹಿವಾಟು ನಡೆಯುತ್ತಿದ್ದು, ಇದಕ್ಕೆ ಮೂಲ ಶಕ್ತಿ ಮಹಿಳೆಯರು. ತಾಲೂಕಿನ ಚಿನ್ನಾಪುರದ ದಲಿತ ಹೆಣ್ಣು ಮಕ್ಕಳು ವಾದರಿಯಾಗಿದ್ದು, 50 ಸಾವಿರದಿಂದ 2 ಲಕ್ಷ ರೂ.ಸಾಲ ಪಡೆದು ಇತರರಿಗೆ ವಾದರಿಯಾಗಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ವಾತನಾಡಿ, ದೇಶದಲ್ಲಿ ಭದ್ರತೆ ರಹಿತ ಸಾಲ ಕೊಟ್ಟ ಇತಿಹಾಸ ಕೋಲಾರ ಡಿಸಿಸಿ ಬ್ಯಾಂಕ್‌ಗೆ ವಾತ್ರವಿದೆ. ಹೆಣ್ಣುಮಕ್ಕಳೇ ಬ್ಯಾಂಕಿಗೆ ಭದ್ರತೆಯಾಗಿದ್ದು, 900 ಕೋಟಿ ರೂ. ಸಾಲ ನೀಡಿದ್ದೇವೆ. 325 ಕೋಟಿ ರೂ. ಉಳಿತಾಯ ವಾಡಿದ್ದಾರೆ ಎಂದರು.

ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ವಾತನಾಡಿ, ಬ್ಯಾಂಕ್ ಬಡ್ಡಿರಹಿತ ಸಾಲ ನೀಡಿ ನಿಮಗೆ ಆರ್ಥಿಕ ಶಕ್ತಿ ತುಂಬುತ್ತಿದೆ. ಈ ಹಣವನ್ನು ಆದಾಯೋತ್ಪನ್ನ ಚಟುವಟಿಕೆಗೆ ಬಳಸಿ, ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ ವಾತನಾಡಿ, ಡಿಸಿಸಿ ಬ್ಯಾಂಕ್ ಮೀಟರ್ ಬಡ್ಡಿ ದಂಧೆಯಿಂದ ರಕ್ಷಣೆ ಒದಗಿಸಿದೆ. ಬ್ಯಾಂಕ್ ಅನ್ನು ದೇವಾಲಯ, ತವರು ಮನೆ ಎಂದು ಭಾವಿಸಿ ಮೋಸ ವಾಡದೆ ಸಾಲ ಮರುಪಾವತಿಸಬೇಕು ಎಂದರು. ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ಪಾಲ್ಗೊಂಡಿದ್ದು, ಸಾಲದ ಚೆಕ್‌ಗಳನ್ನು ಪಡೆದುಕೊಂಡರು. ನಿರ್ದೇಶಕ ಯಲವಾರ ಸೊಣ್ಣೇಗೌಡ ಇತರರು ಉಪಸ್ಥಿತರಿದ್ದರು.

ಮಧ್ಯವರ್ತಿಗಳ ಹಾವಳಿಯಿಲ್ಲದೆ ಸಾಲದ ಪ್ರತಿ ಪೈಸೆಯೂ ನಮ್ಮ ಉಳಿತಾಯ ಖಾತೆಗೆ ಸೇರುವಂತೆ ವಾಡಿರುವ ಗೋವಿಂದಗೌಡ ಅವರು ಶಾಸಕರಾಗಬೇಕು. ಮಹಿಳೆಯರು ಯಾರೋ ನೀಡುವ ಹಣ ಆಮಿಷಕ್ಕೆ ಬಲಿಯಾಗದೆ ಅವರನ್ನು ಆಯ್ಕೆ ವಾಡುವ ಸಂಕಲ್ಪ ವಾಡಬೇಕು. ಬ್ಯಾಂಕ್ ಅಧ್ಯಕ್ಷರೇ ಶಾಸಕರಾದರೆ ನಮಗೆ ಈಗ ನೀಡುತ್ತಿರುವ 5 ಲಕ್ಷ ಬಡ್ಡಿರಹಿತ ಸಾಲ 10 ಲಕ್ಷಕ್ಕೇರುತ್ತದೆ. ನಾರಾಯಣಮ್ಮ, ಮಹಿಳಾ ಸಂದ ಸದಸ್ಯೆ, ಚಿನ್ನಾಪುರ.