ನ್ಯೂಸ್

ಆಭರಣ ವಿನ್ಯಾಸ ಪ್ರದರ್ಶನ, ಮಾರಾಟ ಮೇಳ

ರಾಜಮನೆತನದ ಕುಟುಂಬಗಳಿಗೆ ಆಭರಣ ವ್ಯಾಪಾರಿಯಾಗಿದ್ದ, 155ಗಳ ವರ್ಷ ಸುದೀರ್ಘ ಇತಿಹಾಸ ಹೊಂದಿರುವ ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್ ಗ್ರೂಪ್ ಇದೀಗ ಮೈಸೂರಿನ ಗ್ರಾಹಕರಿಗಾಗಿ ಅಸಾಧಾರಣ ಕರಕುಶಲ ಮತ್ತು ಆಭರಣ ವಿನ್ಯಾಸ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿದೆ.

ಬನ್ನಿಮಂಟಪದ ರಸ್ತೆಯಲ್ಲಿರುವ ಹೋಟೆಲ್ ಗ್ರ್ಯಾಂಡ್ ಮರ್ಕ್ಯೂರ್‌ನಲ್ಲಿ ಆಯೋಜಿಸಿರುವ ಆಭರಣ ವಿನ್ಯಾಸ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಶುಕ್ರವಾರ ನಟಿ ರಾಧ್ಯಾ ಉದ್ಘಾಟಿಸಿದರು. ಸಾಂಪ್ರದಾಯಿಕ ಭವ್ಯತೆ ಮತ್ತು ಸಮಕಾಲೀನ ಸೊಬಗಿನ ಆಭರಣಗಳು ಚಿನ್ನಾಭರಣ ಪ್ರಿಯರ ಮನ ಸೆಳೆಯುತ್ತದೆ. ಅಪರೂಪದ ರತ್ನದ ಕಲ್ಲುಗಳು ಮತ್ತು ಅಸಾಧಾರಣ ಕಲಾತ್ಮಕತೆಯ ಜಗತ್ತಿನಲ್ಲಿ ಗ್ರಾಹಕರ ಚಿಂತನಶೀಲತೆಗಾಗಿ ಸಂಗ್ರಹವಾದ ವಜ್ರಗಳು, ಮಾಣಿಕ್ಯಗಳು, ಮುತ್ತುಗಳು, ವೈಡೂರ್ಯ, ಸಿಟ್ರಿನ್ ಮತ್ತು ಅಚ್ಚರಿಯ ರತ್ನಗಳಿಂದ ಅಲಂಕರಿಕ ಆಭರಣಗಳು ಆಕರ್ಷಿಸುತ್ತಿವೆ. ಚಿನ್ನದ ಸರ, ಬಳೆ, ನೆಕ್‌ಲೆಸ್, ಓಲೆಗಳು, ವಜ್ರಾಭರಣಗಳು ಪಾರಂಪರಿಕ ಶೈಲಿಯೊಂದಿಗೆ, ಆಧುನಿಕತೆಗೆ ತಕ್ಕಂತೆ ವಿನ್ಯಾಸ ಮಾಡಲಾಗಿದ್ದು, ಗ್ರಾಹಕರನ್ನು ತನ್ನತ ಸೆಳೆಯುವಂತೆ ಮಾಡುತ್ತಿದೆ.

ಸಿ.ಕೃಷ್ಣಯ್ಯ ಚೆಟ್ಟಿ ಆಭರಣವು 599ರಿಂದ ಆರಂಭವಾಗಿ ಕೈಗೆಟುಕುವ ಬೆಲೆಯ ಬೆಳ್ಳಿ ಆಭರಣಗಳು ದೊರೆಯುತ್ತವೆ. ಅಲ್ಲದೇ 925 ಹಾಲ್‌ಮಾರ್ಕ್ ಮಾಡಿದ ಶುದ್ಧ ಬೆಳ್ಳಿ ಆಭರಣಗಳು ಇವೆ. 52 ಪಾಯಿಂಟ್ ಗುಣಮಟ್ಟದ ಆಭರಣಗಳು ಲಭ್ಯವಿದೆ. ಬೆಳ್ಳಿಯ ಮೇಲೆ ಶೇ.2 ರಿಯಾಯಿತಿ, ಚಿನ್ನದ ಆಭರಣಗಳ ಮೇಲೆ ಶೇ.4 ರಿಯಾಯಿತಿ ಮತ್ತು ವಜ್ರದ ಮೇಲೆ ಶೇ.6 ರಿಯಾಯಿತಿ ಸೇರಿದಂತೆ ವಿಶೇಷ ಉಳಿತಾಯವನ್ನು ಪಡೆಯಬಹುದಾಗಿದೆ. 18.69 ಲಕ್ಷಕ್ಕಿಂತ ಹೆಚ್ಚಿನ ಖರೀದಿಗಳಿಗೆ, ಗಮನಾರ್ಹವಾದ ಶೇ.9 ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಸಿ. ಕೃಷ್ಣಯ್ಯ ಚೆಟ್ಟಿ ಕೂಡ ಮ್ಯಾಗ್ನಿಫಿಸೆಂಟ್ ವೆಡ್ಡಿಂಗ್ ಕೊಡುಗೆಯನ್ನು ಕೇವಲ 15 ಲಕ್ಷಗಳಲ್ಲಿ ಪರಿಚಯಿಸಿದೆ. ಗ್ರಾಹಕರು ಸಿಕೆಸಿ ಅಥವಾ ಕ್ರಾಸ್ ಕ್ಲಬ್‌ನಿಂದ 7 ಲಕ್ಷ ಮೌಲ್ಯವನ್ನು ಆಭರಣಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಮೇ 9ರಿಂದ 12ರವರೆಗೆ ಬೆಳಗ್ಗೆ 10.30ರಿಂದ ರಾತ್ರಿ 8.30ರವರಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ.

ಈ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಧ್ಯಾ, ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್ ಗ್ರೂಪ್‌ನಿಂದ ಮೈಸೂರಿನಲ್ಲಿ ಆಯೋಜಿಸಿರುವ ಆಭರಣ ಪ್ರದರ್ಶನ ಮತ್ತು ಮಾರಾಟವು, ಗ್ರಾಹಕರನ್ನು ಸೆಳೆಯುತ್ತಿದೆ. ಪಾರಂಪರಿಕ ಮೈಸೂರಿನಲ್ಲಿ ಪಾರಂಪರಿಕ ಮತ್ತು ಆಧುನಿಕತೆಯ ಚಿನ್ನಾಭರಣಗಳನ್ನು ನೋಡಿ, ಕೊಂಡುಕೊಂಡರೆ ತುಂಬಾ ಖುಷಿಯಾಗಲಿದೆ ಎಂದರು.

ಸ್ಟೋರ್ ಮ್ಯಾನೇಜರ್‌ರಾದ ಗೋಪಾಲ್‌ಸಿಂಗ್, ಶ್ರೀಚರಣ್ ಇದ್ದರು.