ಚಿನ್ನಾಭರಣ ತಯಾರಿಕೆ ಕೆಲಸ ಮಾಡುವ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬ ಆಭರಣ ತಯಾರಿಸಲು ನೀಡಿದ್ದ ಚಿನ್ನವನ್ನು ವಾಪಸ್ ನೀಡದೆ ವಂಚಿಸಿದ್ದಾನೆ ಎಂದು ಆರೋಪಿಸಿದ ಚಿನ್ನದ ವ್ಯಾಪಾರಿ ದೂರು ನೀಡಿದ್ದಾರೆ.
ಪಶ್ಚಿಮ ಬಂಗಾಳದ ರೊಹಮನ್ ವಂಚಿಸಿದ್ದಾನೆ ಎಂದು ಲಷ್ಕರ್ ಮೊಹಲ್ಲಾದ ನಿವಾಸಿ ಸುಕಾಂತ್ ಕೊಲಿ ದೂರು ನೀಡಿದ್ದು, ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗೆ ಚಿನ್ನಾಭರಣ ತಯಾರಿಸಿಕೊಡಲು ಆಗಾಗ್ಗೆ ಗಟ್ಟಿ ಚಿನ್ನವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ತಯಾರಿಸಿಕೊಡುತ್ತಿದ್ದರು. ಇತ್ತಿಚೆಗೆ ಚಿನ್ನಾಭರಣ ತಯಾರಿಸಲು 189 ಗ್ರಾಂ ಚಿನ್ನವನ್ನು ಪಡೆದಿದ್ದು, ವಾಪಸ್ ನೀಡದೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.