ನ್ಯೂಸ್

ಆನ್‌ಲೈನ್ ವಹಿವಾಟಿನಲ್ಲಿ ಮೈಯಲ್ಲ ಕಣ್ಣಾಗಿರ ಬೇಕು

ಚಿತ್ರದುರ್ಗ:ಇವತ್ತಿನ ಕಾಲಕ್ಕೆ ಅನಿವಾರ‌್ಯವೆನಿಸಿರುವ ಆನ್‌ಲೈನ್ ವಹಿವಾಟಿನ ವೇಳೆ ಮೈಯಲ್ಲ ಕಣ್ಣಾಗಿರಬೇಕೆಂದು ಎಸ್ಪಿ.ಜಿ.ರಾಧಿಕಾ ಹೇಳಿದರು. ನಗರದ ಆನ್‌ಲೈನ್ ವಂಚನೆ ವಿರುದ್ಧ ಸಿಇಎನ್ ಠಾಣೆ ಪೊಲೀಸರು ಸಿದ್ಧಪಡಿಸಿರುವ ಜಾಗೃತಿ ಆಡಿಯೊ ರಿಲೀಸ್ ಮಾಡಿದ ಅವರು,ನಾ ನಾ ಸೋಗಿನಲ್ಲಿ ಕರೆ ಮಾಡುವ ಮೂಲಕ ಜನರನ್ನು ಸುಲಭವಾಗಿ ವಂಚಿಸುವಂಥ ಕೃತ್ಯಗಳು ವರದಿ ಆಗುತ್ತಿವೆ. ಈ ಕುರಿತು ಜನರನ್ನು ಎ ಚ್ಚರಿಸಲಾಗುತ್ತಿದೆ. ಆದರೆ ವಂಚಕರು ನಿತ್ಯವೂ ಒಂದಲ್ಲ ಒಂದು ಹೊಸ ದಾರಿ ಕಂಡು ಕೊಂಡು ಜನರಿಗೆ ಮೋಸವನ್ನು ಮುಂದುವರಿಸಿ ದ್ದಾರೆ.
ಆನ್‌ಲೈನ್ ಶಾಫಿಂಗ್,ಎಟಿಎಂ,ಕ್ರೆಡಿಟ್ ಕಾರ್ಡ್ ಬಳಕೆ ಇತ್ಯಾದಿಗಳ ಸಂದರ್ಭದಲ್ಲಿ ಎಚ್ಚರ ವಹಿಸಬೇಕು. ಯಾರಿಗೂ ಎಂದಿಗೂ ಕಾರ್ಡ್ ನಂ.ಗಳನ್ನಾಗಿ,ಒಟಿಪಿ ಸಂಖ್ಯೆಯನ್ನಾಗಿ ಹಂಚಿಕೊಳ್ಳಬಾರದು. ಅನಗತ್ಯವಾಗಿ ಯಾರನ್ನೂ ನಂಬಿ ಎಟಿಎಂ ಕಾರ್ಡ್ ಕೊಟ್ಟು ಪಾಸ್ ವರ್ಡ್ ಹೇಳಬಾರದು ಎಂದರು.
ಮೂರೂವರೆ ನಿಮಿಷದ ಈ ಆಡಿಯೊವನ್ನು ನಗರ ಸ್ಥಳೀಯ ಸಂಸ್ಥೆಗಳ ವಾಹನಗಳು ಹಾಗು ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚುರ ಪಡಿಸುವುದಾಗಿ ಹೇಳಿದರು. ಎಎಸ್‌ಪಿ ಎಂ.ಬಿ.ನಂದಗಾವಿ, ಎಪಿ ಎಂಸಿ ಮಾಜಿ ಅಧ್ಯಕ್ಷ ತಿಮ್ಮಣ್ಣ,ಡಾ.ರವೀಂದ್ರರೆಡ್ಡಿ,ಡಿವೈ ಎಸ್ಪಿಗಳಾದ ರಮೇಶ್,ಪಾಂಡುರಂಗಪ್ಪ,ಶ್ರೀಧರ್,ಸಿಪಿಐಗಳಾದ ಗುರುಮೂರ್ತಿ,ಸ್ವಾತಿ ಮತ್ತಿತರ ಅಧಿಕಾರಿಗಳಿದ್ದರು.