ನ್ಯೂಸ್

ಆನೆ ದಾಳಿಯಿಂದ ಪಾರಾದ ಬೈಕ್ ಸವಾರರು

ಚಾಮರಾಜನಗರ: ಜಿಲ್ಲೆಯ ಗಡಿಯಲ್ಲಿರುವ ತಮಿಳುನಾಡಿನ ತಾಳವಾಡಿ ರಸ್ತೆಗೆ ಲಗ್ಗೆ ಇಟ್ಟ ಆನೆಯಿಂದ ಬೈಕ್ ಸವಾರರು ಪಾರಾಗಿದ್ದಾರೆ.

ತಾಳವಾಡಿಯಿಂದ ತಾಲೂಕಿನ‌ ಕುಳ್ಳೂರಿಗೆ ಬೈಕ್ ನಲ್ಲಿ ಶನಿವಾರ ರಾತ್ರಿ ತೆರಳುತ್ತಿದ್ದ ಪುಟ್ಟು, ಮಹದೇವಿ, ಮಂಗಳಮ್ಮ ಮೇಲೆ ಕಾಡಾನೆ ದಾಳಿ ಮಾಡಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಗೆ ಆನೆ ಗುದ್ದಿದೆ. ಅದೃಷ್ಟವಶಾತ್ ಮೂವರೂ ಪ್ರಣಾಪಾಯದಿಂದ ಪಾರಾಗಿದ್ದಾರೆ. ಆನೆ ದಾಳಿ ವೇಳೆ ನೆಲಕ್ಕುರುಳಿದ ಪರಿಣಾಮ ಪುಟ್ಟು, ಮಹದೇವಿ, ಮಂಗಳಮ್ಮಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.