ನ್ಯೂಸ್

ಆದಾಯ ಕೊರತೆ, ಅಭಿವೃದ್ದಿಗೆ ಕೊಕ್ಕೆ

ಗುರುಮಠಕಲ್: ಪುರಸಭೆಯಲ್ಲಿ ತೆರಿಗೆ ಸಂಗ್ರಹವಿಲ್ಲದಿರುವುರಿಂದ ಆದಾಯ ಸಂಗ್ರಹದಲ್ಲಿ ಕೊರತೆ ಉಂಟಾಗಿರುವುದರಿಂದ ಹಾಗೂ ಯಾವುದೇ ಅನುದಾನವಿಲ್ಲದ ಹಿನ್ನೆಲೆಯಲ್ಲಿ ಪಟ್ಟಣದ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳಿಗೆ ಪುರಸಭೆ ಸದಸ್ಯರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ನೇತೃತ್ವದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಅಭಿವೃದ್ದಿ ಕುರಿತು ಚರ್ಚಿಸುವಾಗ ಈ ಘಟನೆ ಬೆಳಕಿಗೆ ಬಂತು. ಪುರಸಭೆಗೆ ಬರುವ ಆದಾಯ ಮೂಲ ಸಂಗ್ರಹವಾಗುತ್ತಿಲ್ಲ. ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನು ತೆರವುಗೊಳಿಸದಿರುವುದು ಹಾಗೂ ಮಳಿಗೆಗಳ ಟೆಂಡರ್ ಕರೆಯುದಿರುವುದು ಮತ್ತು ನೀರಿನ ತೆರಿಗೆ, ಮನೆ ತೆರಿಗೆ ಸಂಗ್ರಹದಲ್ಲಿ ಪುರಸಭೆ ಸಿಬ್ಬಂದಿ ವಿಫಲಗೊಂಡಿದ್ದಾರೆ ಎಂದು ಸಿಡಿಮಿಡಿಗೊಂಡರು.

ಖಾಜಾಮೈನೋದ್ದೀನ್ ಮಾತನಾಡಿ, ಪಟ್ಟಣದಲ್ಲಿ ನೀರಿನ ಕೊರತೆ ಇದೆ. ಬೇಸಿಗೆ ಕಾಲ ಬಂದರೆ ಇನ್ನಷ್ಟು ಸಮಸ್ಯೆಗಳು ಉಲ್ಬಣಗೊಳ್ಳುವ ಮುನ್ನ ಸೂಕ್ತ ಕ್ರಮಕೈಗೊಳ್ಳಬೇಕು. ಪಟ್ಟಣದಲ್ಲಿ ಚರಂಡಿ ಮತ್ತು ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತಾಲೂಕು ಆಡಳಿತ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಜಾಗ ನೀಡಬೇಕು ಮತ್ತು ಹಳೆಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆಯಲ್ಲಿ ಸಾಮಾನ್ಯ ಸಭೆ ಜರುಗವಾಗ ಅಭಿವೃದ್ದಿಗೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದು ಮಾಹಿತಿ ನೀಡಿದರೆ ಚೆನ್ನಾಗಿರುತ್ತಿತ್ತು ಎಂದು ರವೀಂದ್ರರೆಡ್ಡಿ ಶೇರಿ ಸಲಹೆ ನೀಡಿದರು. ಪಟ್ಟಣದಲ್ಲಿ ಧರ್ಮಸ್ಥಳ ಸಂಘದವರಿಗೆ ಜಾಗ ನೀಡಿ ಶೇಡ್ ನಿರ್ಮಾಣ ಮಾಡಿಕೊಟ್ಟಿದಲ್ಲಿ ಅವರು ಶುದ್ದೀಕರಣ ಘಟಕದ ಮಷಿನ್ ಹಾಗೂ ಮೇಲುಸ್ತುವಾರಿ ವಹಿಸಿಕೊಳ್ಳುತ್ತಿರುವ ಕುರಿತು ಚಚರ್ಿಸಿದಾಗ ಸರ್ವ ಸದಸ್ಯರು ಒಪ್ಪಿಗೆ ನೀಡಿದರು.

ಪುರಸಭೆ ಉಪಾಧ್ಯಕ್ಷೆ ಭೀಮಮ್ಮ ಮುಕುಡಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಜೆಇ ಪರಶುರಾಮ, ಪುರಸಭೆ ಸದಸ್ಯರಾದ ಆಶನ್ನ ಬುದ್ದ, ಪಾಪಿರೆಡ್ಡಿ, ನವೀತಾ, ಸೀರಾಜ್ ಚಿಂತಾಕುಂಟಾ, ಬಾಲಪ್ಪ ದಾಸರಿ, ನರಸಪ್ಪ ಗಡ್ಡಲ್, ನವಾಜರೆಡ್ಡಿ, ಅನ್ವರ್, ಪುಷ್ಪವತಿ, ಗೌರಿಶಂಕರ, ಕೃಷ್ಣ ಮೇದಾ, ನರೇಶ ಗೋಂಗ್ಲೆ, ರಮೇಶ, ಮಾಣಿಕ್ಯಪ್ಪ ಜೋಗಿ ಇತರರಿದ್ದರು.