ಚಿತ್ರದುರ್ಗ: ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಮಕ್ಕಳಲ್ಲಿ ಪರೀಕ್ಷೆ ಭಯ ನಿವಾರಿಸಿ ಆತ್ಮವಿಶ್ವಾಸ ವೃದ್ಧಿಸಲು ಸಹಕಾರಿಯಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು.
ಕೇಂದ್ರ ಶಿಕ್ಷಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪರೀಕ್ಷೆ ಒತ್ತಡ ಕಡಿಮೆ ಮಾಡುವ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದವನ್ನು ನಗರದ ಡಯಟ್ ಕಚೇರಿಯಲ್ಲಿ ವೀಕ್ಷಿಸಿ ಮಾತನಾಡಿದರು.
ಮಕ್ಕಳು ಒತ್ತಡ ಮುಕ್ತವಾಗಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಈ ಕಾರ್ಯಕ್ರಮ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.
ಹಿರಿಯೂರು ತಾಲೂಕಲ್ಲಿ 15328 ವಿದ್ಯಾರ್ಥಿಗಳು, 843 ಶಿಕ್ಷಕರು. ಮೊಳಕಾಲ್ಮೂರು-13359-530. ಹೊಸದುರ್ಗ-11108-853. ಚಿತ್ರದುರ್ಗ-22190-572. ಹೊಳಲ್ಕೆರೆ-12968- 930 ಹಾಗೂ ಚಳ್ಳಕೆರೆ ತಾಲೂಕಿನಲ್ಲಿ 21542 ವಿದ್ಯಾರ್ಥಿಗಳು, 725 ಶಿಕ್ಷಕರು ಕಾರ್ಯಕ್ರಮ ವೀಕ್ಷಿಸಿದ್ದಾರೆ ಎಂದು ತಿಳಿಸಿದರು.
ಹಿರಿಯ ಉಪನ್ಯಾಸಕರಾದ ಎಸ್.ಸಿ. ಪ್ರಸಾದ್, ಎಸ್. ಜ್ಞಾನೇಶ್ವರ, ಎಚ್. ಗಿರಿಜಾ, ತಿಪ್ಪೇಸ್ವಾಮಿ, ಪೂರ್ಣಿಮಾ, ಉಪನ್ಯಾಸಕರಾದ ಎಸ್. ಬಸವರಾಜು, ವಿ. ಕನಕಮ್ಮ, ಸಿ.ಎಸ್. ಲೀಲಾವತಿ, ಅರ್ಜುಮಂದ್ ಬಾನು, ಎಲ್. ರೇವಣ್ಣ, ಶಿವಲೀಲಾ, ಪದ್ಮ, ರಂಗಸ್ವಾಮಿ, ಎಪಿಸಿ ಕು ಸುಮಾ, ತಾಂತ್ರಿಕ ಸಹಾಯಕ ಅವಿನಾಶ್ ಮತ್ತಿತರರು ಇದ್ದರು.