ಹುಬ್ಬಳ್ಳಿ: ಧಾರವಾಡ - ಹಳಿಯಾಳ ಮಾರ್ಗದ ಹೊಲ್ತಿಕೋಟಿ ಗ್ರಾಮದ ಬಳಿ ಶನಿವಾರ ಚಿರತೆ ಕಾಣಿಸಿಕೊಂಡಿದೆ. ಗ್ರಾಮದ ಬಳಿಯ ಬೆಟ್ಟದಲ್ಲಿ ಚಿರತೆಯೊಂದು ಮೇಕೆಯನ್ನು ತಿಂದು, ಮೇಕೆಯ ಅಳಿದುಳಿದ ಭಾಗವನ್ನು ಅಲ್ಲಿಯೇ ಬಿಟ್ಟುಹೋಗಿದೆ. ಚಿರತೆಯ ಇರುವಿಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಚಿರತೆಯ ಓಡಾಟ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹೊಲ್ತಿಕೋಟಿ ಗ್ರಾಮದ ಸುತ್ತಲೂ ಅರಣ್ಯ ಪ್ರದೇಶ ಇದೆ. ಅಲ್ಲಿ ಚಿರತೆಗಳ ಸಂಚಾರ ಸಾಮಾನ್ಯವಾಗಿದೆ. ಆದರೆ, ಇದುವರೆಗೆ ಚಿರತೆಗಳು ಗ್ರಾಮಗಳಿಗೆ ಪ್ರವೇಶಿಸಿಲ್ಲ ಎಂದು ಧಾರವಾಡ ವಲಯದ ಆರ್ ಎಫ್ ಒ ಆರ್.ಎಸ್. ಉಪ್ಪಾರ ತಿಳಿಸಿದ್ದಾರೆ.